ಭಾರತೀಯರಾದ ನಮಗೆ ಹುಣಸೆ ಹಣ್ಣು ಇಲ್ಲದೆ ಅಡುಗೆ ತಯಾರಾಗುವುದೇ ಇಲ್ಲ. ಇದು ಜೀರ್ಣಕ್ರಿಯೆಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಕಾರಿ. ಇದರಿಂದ ತ್ವಚೆಗೂ ಒಳ್ಳೆಯದು. ಹೇಗೆಂದಿರಾ?
ಹುಣಸೆ ಹಣ್ಣಿನ ಫೇಸ್ ವಾಶ್ ತಯಾರಿಗೆ ಮೊದಲು ಬೀಜ ತೆಗೆದು ನೀರಿನಲ್ಲಿ ನೆನೆಸಿ, ದಪ್ಪ ರಸ ತೆಗೆದಿಟ್ಟುಕೊಳ್ಳಿ. ಆದಕ್ಕೆ ಮೊಸರು ಹಾಗೂ ರೋಸ್ ವಾಟರ್ ಬಳಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಳಿಕ ತೊಳೆಯಿರಿ. ಹುಣಸೆ ಹಣ್ಣು ಮತ್ತು ಮೊಸರು ನಿಮ್ಮ ಚರ್ಮವನ್ನು ಸ್ವಚ್ಛ ಮಾಡುತ್ತದೆ.
ಹುಣಸೆ ಹಣ್ಣಿನ ದಪ್ಪ ರಸಕ್ಕೆ ಜೇನು ತುಪ್ಪ, ಕಡಲೆ ಹಿಟ್ಟು ಬೆರೆಸಿ ಮುಖಕ್ಕೆ ಕುತ್ತಿಗೆಗೆ ಸಮವಾಗಿ ಹಚ್ಚಿ. ಬಳಿಕ ತಣ್ಣೀರಿನಿಂದ ತೊಳೆದು ಮಾಯಿಸ್ಟರೈಸರ್ ಹಚ್ಚಿ. ಜೇನುತುಪ್ಪ ಚರ್ಮವನ್ನು ತೇವಗೊಳಿಸುತ್ತದೆ. ಕಡಲೆ ಹಿಟ್ಟು ಕಪ್ಪು ಕಲೆ, ಟ್ಯಾನಿಂಗ್ ಅನ್ನು ತೆಗೆದು ಹಾಕುತ್ತದೆ. ಎಣ್ಣೆ ಯುಕ್ತ ತ್ವಚೆಯವರಿಗೆ ಇದು ಬಹು ಉಪಕಾರಿ.
ಹುಣಸೆ ರಸಕ್ಕೆ ಅರಿಶಿನ ಬೆರೆಸಿ ಕುದಿಸಿ. ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿ. 20 ನಿಮಿಷ ಬಳಿಕ ತೊಳೆದರೆ ಮುಖದ ಸುಕ್ಕು ಮತ್ತು ಕಲೆಗಳು ಇಲ್ಲವಾಗುತ್ತವೆ.