ಹುಣಸೆ ರಸವನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಈ ಹುಣಸೆ ರಸದಿಂದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಹಾಗಾಗಿ ತೂಕ ಇಳಿಸಲು ಹುಣಸೆ ರಸದ ಪಾನೀಯ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಈ ಪಾನೀಯ ತಯಾರಿಸಲು ಜೇನುತುಪ್ಪ, ಹುಣಸೆಹಣ್ಣು, ಐಸ್ ಕ್ಯೂಬ್ ಬೇಕಾಗುತ್ತದೆ. ಮೊದಲು ಹುಣಸೆಹಣ್ಣನ್ನು ಚೆನ್ನಾಗಿ ತೊಳೆದು ಅದರಿಂದ ಬೀಜ ಹೊರತೆಗೆಯಿರಿ. 2 ಲೋಟ ನೀರು ಕುದಿಸಿ ಅದರಲ್ಲಿ ಹುಣಸೆಹಣ್ಣು ಹಾಕಿ ಅದರ ರಸ ತೆಗೆಯಿರಿ. ಅದಕ್ಕೆ ಜೇನುತುಪ್ಪ ಮತ್ತು ಐಸ್ ಕ್ಯೂಬ್ ಸೇರಿಸಿ.
ಇದು ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯನ್ನು ಸ್ವಚ್ಚಗೊಳಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.