ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ ‘ತಲ್ವಾರ್’ ಚಿತ್ರತಂಡ 06-01-2025 5:10PM IST / No Comments / Posted In: Featured News, Live News, Entertainment ನಟ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ನಿಂದ ಹೊರಬಂದ ಬಳಿಕ ‘ತಲ್ವಾರ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಈಗಾಗಲೇ ಜನವರಿ ತಿಂಗಳಲ್ಲಿ ತೆರೆ ಮೇಲೆ ಬರಬೇಕಿತ್ತು. ಕಾರಣಾಂತರದಿಂದ ಮುಂದೂಡಲಾಗಿದ್ದು, ಫೆಬ್ರವರಿ 7ಕ್ಕೆ ‘ತಲ್ವಾರ್’ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ಈ ಚಿತ್ರವನ್ನು ಮುಮ್ತಾಜ್ ಮುರಳಿ ನಿರ್ದೇಶಿಸಿದ್ದು, ಧರ್ಮ ಕೀರ್ತಿರಾಜ್ ಸೇರಿದಂತೆ ಅದಿತಿ, ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ ತೆರೆ ಹಂಚಿಕೊಂಡಿದ್ದಾರೆ. ಟಚ್ ಪಿಚ್ಚರ್ಸ್ ಬ್ಯಾನರ್ ನಡಿ ಬಿ.ಎಂ ಸುರೇಶ್ ನಿರ್ಮಾಣ ಮಾಡಿದ್ದು, ಪ್ರವೀಣ್ ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡ್ಯಾನಿ, ವಿನೋದ್ ಹಾಗೂ ಕುಂಫು ಚಂದ್ರು ಅವರ ಸಾಹಸ ನಿರ್ದೇಶನವಿದ್ದು, ಸುರೇಶ್ ಬೈರಸಂದ್ರ ಛಾಯಾಗ್ರಹಣವಿದೆ. View this post on Instagram A post shared by Dharma Kirthiraj (@dharmakirthiraj_official)