ಜಯಪುರ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಯಪುರದ ಬಿಜಿಎಸ್ ಪದವಿ ಪೂರ್ವ ಕಾಲೇಜು 52 ಪ್ರಶಸ್ತಿ ಪಡೆದಿದೆ.
ಜಯಪುರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 34 ವಿಭಾಗಗಳಲ್ಲಿ 52 ಪ್ರಶಸ್ತಿಯನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. PU ಕಾಲೇಜಿನ ವಿದ್ಯಾರ್ಥಿ ತೇಜಸ್ ಎ ರಾವ್ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ದಿನಾಂಕ 30-08-24, ಮತ್ತು 31-08-24 ರಂದು ಅ.ರಾ.ಸ ಪದವಿ ಪೂರ್ವ ಕಾಲೇಜು ಹರಿಹರಪುರದಲ್ಲಿನಡೆದ ಕೊಪ್ಪ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಬಿಜಿಎಸ್ ಜಯಪುರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತೇಜಸ್ ಎ ರಾವ್ ಸತತ ಎರಡನೇ ಬಾರಿಗೆ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ ಹಾಗೆಯೇ ತಾನು ಪ್ರತಿನಿಧಿಸಿದ ಮೂರು ವಿಭಾಗದಲ್ಲಿಯೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಹಾಗೆಯೇ ಕೆಲವು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 33 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿವರಗಳು ಈ ಕೆಳಕಂಡಂತಿವೆ :
1) ತೇಜಸ್ ಎ ರಾವ್ ಗುಂಡು ಎಸೆತ, ಚಕ್ರ ಎಸೆತ, ಮತ್ತು ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ.
2) ಕಿಶನ್ ಚಕ್ರ ಮತ್ತು ಹ್ಯಾಮರ್ ಥ್ರೋ ದ್ವಿತೀಯ ಸ್ಥಾನ.
3) ಸನತ್ ತ್ರಿವಿಧ ಜಿಗಿತ ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಮತ್ತು ಉದ್ದ ಜಿಗಿತ ತೃತೀಯ ಸ್ಥಾನ.
4) ಸಾನಿಕ ಎಸ್ ಗುಡ್ಡಗಾಡು ಓಟದಲ್ಲಿ ದ್ವಿತೀಯ 1500 ಮತ್ತು 800 ಓಟದಲ್ಲಿ ತೃತೀಯ ಸ್ಥಾನ.
5) ಕೀರ್ತನ 400 ಮೀಟರ್ ಹರ್ಡರ್ಸ್ ದ್ವಿತೀಯ ಸ್ಥಾನ.
6) ಅಂಕುಶ್ ಯೋಗದಲ್ಲಿ ತೃತೀಯ ಸ್ಥಾನ.
7) ಆದಿತ್ಯ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ.
8) ಪಾವನ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ.
9) ಸ್ವಪ್ನ 100 ಮೀಟರ್ ಓಟದಲ್ಲಿ ದ್ವಿತೀಯ, 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ.
10) ವರ್ಷಿಣಿ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ.
11) ಮನ್ವಿತ್ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ.
12) ಪ್ರಶಾಂತ್ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ.
13) ಧನ್ಯ ಗುಂಡು ಎಸೆತದಲ್ಲಿ ತೃತೀಯ ಸ್ಥಾನ.
14) ಬಾಲಕರ ವಾಲಿಬಾಲ್ ಪ್ರಥಮ ಸ್ಥಾನ.
15) ಬಾಲಕಿಯರ ಟೆನ್ನಿಕಾಯ್ತ್ ಪ್ರಥಮ ಸ್ಥಾನ.
16) ಬಾಲಕಿಯರ ರಿಲೇ 4×400 ಪ್ರಥಮ ಸ್ಥಾನ.
17) ಬಾಲಕರ ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ.
18) ಬಾಲಕರ ಖೋಖೊ ದ್ವಿತೀಯ ಸ್ಥಾನ.
19) ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ.
20) ಬಾಲಕಿಯರ ಟೇಬಲ್ ಟೆನ್ನಿಸ್ ತೃತೀಯ ಸ್ಥಾನ ಪಡೆದಿರುತ್ತಾರೆ.
21) ಬಾಲಕ ಮತ್ತು ಬಾಲಕಿಯರ 4×100 ದ್ವಿತೀಯ ಸ್ಥಾನ
22) ಮಹಮದ್ ಅಫ್ಜಲ್ 800 ಮೀ ಓಟದಲ್ಲಿ ತೃತೀಯ ಸ್ಥಾನ
23) ತರುಣ್ ಎಲ್ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ
24) ಪ್ರಜ್ವಲ್ ಜಾವೆಲಿನ್ ಎಸೆತದಲ್ಲಿ ತೃತೀಯ ಸ್ಥಾನ.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾಗೂ ಬಹುಮಾನಗಳನ್ನು ಗಳಿಸಿರುವ ವಿಜೇತರಿಗೆ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಕ್ರೀಡಾ ಕಾರ್ಯದರ್ಶಿ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ಅಭಿನಂದಿಸಿರುತ್ತಾರೆ.