ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಅಪರೂಪವಾಗ್ತಿವೆ. ಮಕ್ಕಳು ತಂದೆ-ತಾಯಿಯೊಂದಿಗೆ ಇರದ ಪರಿಣಾಮ ಅವರಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮಕ್ಕಳು ಸ್ವಯಂ ಕೇಂದ್ರಿತರಾಗುತ್ತಿದ್ದಾರೆ ಮತ್ತು ಅವರ ಭಾವನಾತ್ಮಕ ಬಾಂಧವ್ಯವೂ ಕಡಿಮೆಯಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಮಕ್ಕಳು ಕುಟುಂಬದಿಂದ ಬೇರ್ಪಡಲು ಪ್ರಾರಂಭಿಸುತ್ತಾರೆ.
ಮಕ್ಕಳನ್ನು ಭಾವನಾತ್ಮಕವಾಗಿ ಹೆತ್ತವರೊಂದಿಗೆ ಸಂಪರ್ಕಿಸಲು ಬಯಸಿದರೆ ಮತ್ತು ಅವರಿಗೆ ಮೌಲ್ಯಗಳನ್ನು ಕಲಿಸಲು ಬಯಸಿದರೆ ಸ್ಲೀಪ್ ಟಾಕ್ ಥೆರಪಿಯ ಸಹಾಯವನ್ನು ತೆಗೆದುಕೊಳ್ಳಬಹುದು. ಈ ಥೆರಪಿ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.
ಸ್ಲೀಪ್ ಟಾಕ್ ಥೆರಪಿ ಎಂದರೇನು?
ತಜ್ಞರ ಪ್ರಕಾರ ಸ್ಲೀಪ್ ಟಾಕ್ ಥೆರಪಿಯನ್ನು 2 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಚಿಕಿತ್ಸೆಯಲ್ಲಿ ಪೋಷಕರು ಮಲಗುತ್ತಿರುವ ಮಗುವಿನೊಂದಿಗೆ ಮಾತನಾಡಬಹುದು. ಸ್ವಲ್ಪ ಸಮಯದವರೆಗೆ ಮಗು ಜಾಗೃತ ಮನಸ್ಸಿನಲ್ಲಿ ಉಳಿಯುತ್ತದೆ. ಮಗು ಅರೆ ನಿದ್ರೆ ಮತ್ತು ಅರೆ ಎಚ್ಚರಾವಸ್ಥೆಯಲ್ಲಿದ್ದಾಗ ಸ್ಲೀಪ್ ಟಾಕ್ ಮಾಡಬೇಕು. ಈ ಸಮಯದಲ್ಲಿ ಮಗು ನಿಮ್ಮ ಮಾತುಗಳನ್ನು ಕೇಳುವುದು ಮತ್ತು ಅರ್ಥಮಾಡಿಕೊಳ್ಳುವುದು ಯೋಗ್ಯವಾಗಿದೆ. ಅಂತಹ ಸಮಯದಲ್ಲಿ ಹೆತ್ತವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಮಕ್ಕಳು ಯಾವುದೇ ಹಸ್ತಕ್ಷೇಪವಿಲ್ಲದೆ ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಬಹುದು.
ಸ್ಲೀಪ್ ಟಾಕ್ ಥೆರಪಿ ಎಷ್ಟು ಪರಿಣಾಮಕಾರಿ?
ಮಕ್ಕಳ ವೈದ್ಯರ ಪ್ರಕಾರ, ಸ್ಲೀಪ್ ಟಾಕ್ ಥೆರಪಿ ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತದೆ. ಏಕೆಂದರೆ ಈ ಸಮಯದಲ್ಲಿ ಮಗುವಿನ ಮೆದುಳು ಸಂಪೂರ್ಣವಾಗಿ ಸಕ್ರಿಯವಾಗಿರುತ್ತದೆ. ಏನೇ ಹೇಳಿದರೂ ಮಗು ಅದನ್ನು ಗಮನವಿಟ್ಟು ಕೇಳುತ್ತದೆ. ಸರಿಯಾಗಿ ಪ್ರತಿಕ್ರಿಯಿಸುತ್ತದೆ. ಮಲಗಿದ ನಂತರ ಸ್ವಲ್ಪ ಸಮಯ ಮಕ್ಕಳೊಂದಿಗೆ ಮಾತನಾಡುತ್ತ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಈ ಥೆರಪಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ ಉತ್ತಮವೆಂದು ಪರಿಗಣಿಸಲಾಗಿದೆ.
ಸ್ಲೀಪ್ ಟಾಕ್ ಥೆರಪಿಯ ಪ್ರಯೋಜನಗಳು…
ಮಗು ಭಾವನಾತ್ಮಕವಾಗಿ ಬಲಶಾಲಿಯಾಗುತ್ತದೆ ಮತ್ತು ನಡವಳಿಕೆಯಲ್ಲೂ ಬದಲಾವಣೆ ಕಂಡುಬರುತ್ತದೆ.
ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ, ಅವರು ಹೆಚ್ಹೆಚ್ಚು ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಾರೆ.
ಮಕ್ಕಳು ಮಾನಸಿಕವಾಗಿ ಸದೃಢರಾಗಿರುತ್ತಾರೆ.
ಭಯವಿಲ್ಲದೆ, ಮಕ್ಕಳು ತಮ್ಮ ಸ್ವಂತ ನಿರ್ಧಾರಗಳನ್ನು ಉತ್ತಮ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ.
ಮಕ್ಕಳು ತಮ್ಮ ಹೆತ್ತವರೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುತ್ತಾರೆ ಮತ್ತು ಅವರಿಗೆ ಪ್ರೀತಿ-ಗೌರವವನ್ನು ನೀಡುತ್ತಾರೆ. ಇದರಿಂದ ಸಂಬಂಧವೂ ಗಟ್ಟಿಯಾಗುತ್ತದೆ.