ತಾಲಿಬಾನಿಗಳು, ಅಫ್ಘಾನಿಸ್ತಾನದ ಚಿತ್ರಣವನ್ನು ಬದಲಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬದುಕು ದುಸ್ತರವಾಗಿದೆ. ಸಣ್ಣ ಹೆಣ್ಣು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಜೀವ ಕೈನಲ್ಲಿ ಹಿಡಿದು ಬದುಕುವಂತಾಗಿದೆ. ಮದುವೆಯಾಗಲು, ತಾಲಿಬಾನಿಗಳು 12-15 ವರ್ಷದ ಹುಡುಗಿಯರನ್ನು ಹುಡುಕುತ್ತಿದ್ದಾರೆಂಬ ಸುದ್ದಿ ಬಂದಿತ್ತು. ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಮದುವೆ ಹೆಸರಿನಲ್ಲಿ 21 ವರ್ಷದ ಹುಡುಗಿಯನ್ನು ಮನೆಯಿಂದ ಹೊತ್ತೊಯ್ದ ತಾಲಿಬಾನಿಗಳು ನಿರಂತರ ಅತ್ಯಾಚಾರವೆಸಗಿದ್ದಾರೆ.
ಮೊದಲು ಹಳ್ಳಿಗೆ ಬಂದ ತಾಲಿಬಾನಿಗಳು, ತಮ್ಮ ನಾಯಕ, ನಿನ್ನ ಮಗಳನ್ನು ಮದುವೆಯಾಗಲು ಬಯಸಿದ್ದಾನೆ ಎಂದಿದ್ದರಂತೆ. ಇದಕ್ಕೆ ಪೀಡಿತೆ ತಂದೆ ಒಪ್ಪಿರಲಿಲ್ಲವಂತೆ. ಅಷ್ಟರಲ್ಲಾಗ್ಲೇ ಹುಡುಗಿಯನ್ನು ತಾಲಿಬಾನಿಗಳು ಹೊತ್ತೊಯ್ದಿದ್ದರಂತೆ. ಮಗ ಮದುವೆಯಾಗಿ ನಾಲ್ಕು ದಿನಗಳ ನಂತ್ರ, ಮಗಳ ಮೇಲೆ ನಾಲ್ಕರಿಂದ ಐದು ಮಂದಿ ರಾತ್ರಿ ನಿರಂತರ ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದಾರೆಂಬ ಸಂಗತಿ ತಿಳಿಯಿತಂತೆ. ಇದಾದ ನಂತ್ರ ಉಳಿದ ಹೆಣ್ಣು ಮಕ್ಕಳ ಜೊತೆ ಆತ ಹಳ್ಳಿ ತೊರೆದಿದ್ದಾನೆ.
ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಿಸುತ್ತಿತ್ತು. ನಿಧಾನವಾಗಿ ಮಹಿಳೆಯರು ಹೊರಗೆ ಬರಲು ಶುರು ಮಾಡಿದ್ದರು. ಮಹಿಳೆಯರಿಗೆ ಸ್ವಾತಂತ್ರ್ಯ ಸಿಗಲು ಶುರುವಾಗಿತ್ತು. ಆದರೆ ಮತ್ತೆ ತಾಲಿಬಾನಿ ಆಳ್ವಿಕೆ ಶುರುವಾಗಿದ್ದು, ಮಹಿಳೆಯರಿಗೆ ನರಕ ಶುರುವಾಗಿದೆ.