ಕಾಬೂಲ್: ತಾಲಿಬಾನ್ ಉಗ್ರರು ಕಶ್ನಾಬಾದ್ ಕಣಿವೆಯ ಬಳಿ ಇಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿದ್ದಾರೆ. ಮಕ್ಕಳ ಪೋಷಕರು ಶರಣಾಗುವಂತೆ ಬ್ಲಾಕ್ಮೇಲ್ ಮಾಡಲಾಗುತ್ತಿದೆ.
ದೊಡ್ಡವರು ಮಾತ್ರವಲ್ಲದೆ ಕಂದಮ್ಮಗಳ ಮೇಲೆ ತಾಲಿಬಾನ್ ಗಳು ಕ್ರೌರ್ಯ ಮೆರೆಯುತ್ತಿದ್ದು, ಇಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಮಕ್ಕಳ ಪೋಷಕರ ಶರಣಾಗುವಂತೆ ವಾರ್ನಿಂಗ್ ಮಾಡಿದ್ದಾರೆ.
ಅಫ್ಘಾನಿಸ್ತಾನದ ಬಿಕ್ಕಟ್ಟಿನ ನಡುವೆ ಈ ಆಘಾತಕಾರಿ ಬೆಳವಣಿಗೆ ನಡೆದಿದೆ. ಕಣಿವೆಯಲ್ಲಿ 20 ಮಕ್ಕಳನ್ನು ಕಿಡ್ನಾಪ್ ಮಾಡಿದ ತಾಲಿಬಾನ್ ಉಗ್ರರು ತಮ್ಮ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿದ್ದ ಪುರುಷರು ಶರಣಾಗಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದ ಬಾನು, ಪೋಲ್-ಎ-ಹೆಸಾರ್ ಮತ್ತು ಡಿ ಸಲಾಹ್ ಮತ್ತು ಪಂಜಶೀರ್‌ನಲ್ಲಿ ಉಗ್ರರನ್ನು ಹಿಮ್ಮೆಟ್ಟಿಸಲಾಗಿದ್ದು, ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆಗಳ ನಂತರ ಮಕ್ಕಳನ್ನು ಅಪಹರಿಸಿ ಶರಣಾಗಲು ಭಯೋತ್ಪಾದಕರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಸಜ್ಜಾಗಿರುವ ಆಫ್ಘನ್ ಉತ್ತರ ಭಾಗದ ಜಿಲ್ಲೆಗಳು ಸಜ್ಜಾಗಿವೆ.