ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದಿರುಗಿದ ಬಳಿಕ ಕಾಬೂಲ್‌ನಲ್ಲಿರುವ ದೊಡ್ಡಣ್ಣನ ರಾಯಭಾರ ಕಚೇರಿಯಲ್ಲಿ ತನ್ನ ಧ್ವಜ ಹಾರಿಸಿರುವ ತಾಲಿಬಾನ್, ಅಮೆರಿಕವನ್ನು ಸೋತು ಓಡಿಹೋದ ದೇಶವೆಂದು ಜರಿದಿದೆ.
“ನಾವು ಅವರೊಂದಿಗೆ 20 ವರ್ಷಗಳ ಕಾಲ ಕಾದಾಡಿದೆವು. ಅವರು ಸೋಲು ಕಂಡು ಹೋಗಿದ್ದಾರೆ. ಇಂದು ನಾವು ಅವರ ರಾಯಭಾರ ಕಚೇರಿಯನ್ನು ತಾಲಿಬಾನ್ ಧ್ವಜದಿಂದ ಸಿಂಗರಿಸಿದ್ದೇವೆ” ಎಂದು ಸಿಎನ್‌ಎನ್-ನ್ಯೂಸ್ 18 ಜೊತೆಗೆ ತಾಲಿಬಾನ್ ಹೇಳಿಕೊಂಡಿದೆ.
ತನ್ನ ವಿರುದ್ಧ ಪ್ರತಿರೋಧ ಕೇಳಿಬರುತ್ತಿದ್ದ ಕೊನೆಯ ಪ್ರದೇಶವಾದ ಪಂಜ್‌ಶಿರ್ ಕಣಿವೆಯಲ್ಲಿ ಮಹತ್ವದ ಕದನದಲ್ಲಿ ಗೆಲುವು ಸಾಧಿಸಿದ ಬಳಿಕ ಇಡೀ ಅಫ್ಘಾನಿಸ್ತಾನ ತನ್ನ ಹಿಡಿಯದಲ್ಲಿದೆ ಎಂದು ಹೇಳಿಕೊಂಡಿರುವ ತಾಲಿಬಾನ್, “ಅಮೆರಿಕ ನಮ್ಮನ್ನು ತಡೆದು ನಿಲ್ಲಿಸಲು ಆಗುವುದಿಲ್ಲ” ಎಂದಿದೆ.
ರಜೆ ನಿರಾಕರಿಸಿದ ಬಾಸ್: ಕೋರ್ಟ್ ಮೊರೆ ಹೋದ ಮಹಿಳಾ ಉದ್ಯೋಗಿಗೆ ಪರಿಹಾರ ಸಿಕ್ಕಿದ್ದೆಷ್ಟು ಗೊತ್ತಾ….?
ಅಫ್ಘಾನಿಸ್ತಾನದ ಮಿಲಿಟರಿಯ ಸಿಬ್ಬಂದಿಯನ್ನು ತಮ್ಮೊಂದಿಗೆ ಸೇರಿಕೊಳ್ಳಲು ಆಗ್ರಹಿಸಿರುವ ತಾಲಿಬಾನಿ ನಾಯಕರು, ತಮ್ಮ ಆಡಳಿತದ ವಿರುದ್ಧ ದನಿಯೆತ್ತುವವರಿಗೆ ಎಚ್ಚರಿಕೆ ನೀಡಿದ್ದಾರೆ.
“ಈ ವಿಜಯದೊಂದಿಗೆ, ನಮ್ಮ ದೇಶವನ್ನು ಯುದ್ಧದ ಕೆಸರಿನಿಂದ ಸಂಪೂರ್ಣವಾಗಿ ಬಿಡಿಸಿಕೊಂಡಿದ್ದೇವೆ, ಎಂದು ತಾಲಿಬಾನ್ ವಕ್ತಾರ ಜ಼ಬಿಹುಲ್ಲಾ ಮುಜ಼ಾಹಿದ್ ಹೇಳಿದ್ದಾನೆ.
1980ರಲ್ಲಿ ಸೋವಿಯತ್ ಆಕ್ರಮಣಕ್ಕೆ ಪ್ರತಿರೋಧ ಕಂಡುಬಂದ ಪಂಜ್‌ಶಿರ್ ಪ್ರದೇಶದಲ್ಲಿ 1990ರ ಕೊನೆಯರ್ಧದ ವೇಳೆ ತಾಲಿಬಾನಿಗಳ ವಿರುದ್ಧ ಪ್ರತಿರೋಧ ಕಂಡುಬಂದಿತ್ತು.
ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥ ಪೈಜ಼್ ಹಮೀದ್ ಕಾಬೂಲ್‌ಗೆ ಭೇಟಿಕೊಟ್ಟು ಭಯೋತ್ಪಾದಕ ಸಂಘಟನೆಯ ನಾಯಕರೊಂದಿಗೆ ಮಾತನಾಡಿದ ಹಿನ್ನೆಲೆಯಲ್ಲಿ ತಾಲಿಬಾನ್ ತನ್ನ ಹೊಸ ಸರ್ಕಾರ ರಚನೆಯ ವಿಷಯವನ್ನು ಕೂಡಲೇ ಘೋಷಿಸಲಿದೆ.