ಕಾಬೂಲ್: ಇಸ್ಲಾಂ ಮೂಲಭೂತವಾದ, ಷರಿಯಾ ಕಾನೂನು ಹೆಸರಿನಲ್ಲಿ ಅಫ್ಘಾನಿಸ್ತಾನವನ್ನು 1000 ವರ್ಷಗಳ ಹಿಂದಿನ ಕಟ್ಟುಪಾಡುಗಳಿಗೆ ದೂಡುತ್ತಿರುವ ತಾಲಿಬಾನ್ ಉಗ್ರರು ಶಿಕ್ಷಣ ವಾತಾವರಣ ಹೇಗಿರಬೇಕು ಎಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಖಾಸಗಿ ಶಾಲೆಗಳು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಪಾಠ ನಡೆಯಬೇಕು. ಸಹಶಿಕ್ಷಣ ಇರಲೇಕೂಡದು. ಅದು ಸಾಧ್ಯವಾಗದಿದ್ದರೆ , ಯುವಕರು-ಯುವತಿಯರ ಆಸನ ವ್ಯವಸ್ಥೆಗಳ ನಡುವೆ ಒಂದು ದೊಡ್ಡ ಪರದೆ ಇರಬೇಕು. ಒಬ್ಬರ ಮುಖ ಮತ್ತೊಬ್ಬರಿಗೆ ಕಾಣಬಾರದು. ಹೆಣ್ಣುಮಕ್ಕಳು ಕಡ್ಡಾಯವಾಗಿ ನಿಕಾಬ್ ಧರಿಸಿರಲೇಬೇಕು !
ಬೆಚ್ಚಿಬೀಳಿಸುವಂತಿದೆ ಕಳೆದ 4 ವರ್ಷಗಳಲ್ಲಿ ಸಿಡಿಲಿಗೆ ಬಲಿಯಾದ ಒಡಿಶಾ ಜನರ ಸಂಖ್ಯೆ
ಇನ್ನೂ ಒಂದು ಹೆಜ್ಜೆ ಮುಂದುವರಿದಂತೆ, ವಿದ್ಯಾರ್ಥಿನಿಯರಿಗೆ ಯುವ ಅಧ್ಯಾಕರು, ಶಿಕ್ಷಕರು, ಮಧ್ಯವಯಸ್ಕ ಪುರುಷರು ಪಾಠ ಮಾಡುವಂತೆಯೇ ಇಲ್ಲ. ಮಹಿಳೆಯರು ಅಥವಾ ಸನ್ನಡತೆಯುಳ್ಳ ವೃದ್ಧ ಅಧ್ಯಾಪಕರು ಮಾತ್ರವೇ ಪಾಠ ಮಾಡಬೇಕು ಎನ್ನುವುದು ತಾಲಿಬಾನ್ ಹೊರಡಿಸಿರುವ ಹೊಸ ಆದೇಶ.
ತಾಲಿಬಾನ್ ಉಗ್ರರನ್ನು ಬಗ್ಗುಬಡಿದು ಅಮೆರಿಕ ಸೇನಾ ಪಡೆಗಳು ಗಡಿಪಾರು ಮಾಡಿದ ನಂತರ 2001ರಿಂದ ಬಹಳಷ್ಟು ಖಾಸಗಿ ವಿಶ್ವವಿದ್ಯಾಲಯಗಳು ಅಫ್ಘಾನಿಸ್ತಾನದಲ್ಲಿ ತಲೆ ಎತ್ತಿವೆ. ಇಲ್ಲಿನ ಶಿಕ್ಷಣ ಕ್ರಮವನ್ನು ತಾಲಿಬಾನ್ ಉಗ್ರರು ಸದ್ಯ ನಿಯಂತ್ರಿಸುವ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.