ಭಾರತದ ರಾಯಭಾರಿ ದೀಪಲ್ ಮಿತ್ತಲ್ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ.
ಅಫ್ಘಾನಿಸ್ತಾನದಲ್ಲಿ ಇದೀಗ ತಾನೇ ಆಡಳಿತಕ್ಕೆ ಮತ್ತೆ ಬಂದ ತಾಲಿಬಾನ್ ಅಗ್ರ ಏಳು ನಾಯಕರಲ್ಲಿ ಒಬ್ಬನಾದ ಶೇರ್ ಮೊಹಮ್ಮದ್ ಅಬ್ಬಾದ್ ಸ್ಟಾನಿಕ್‌ಜ಼ಾಯ್ ಈ ಭಯೋತ್ಪಾದಕ ಸಂಘಟನೆಯ ರಾಜತಾಂತ್ರಿಕ ಕೆಲಸಗಳ ಉಸ್ತುವಾರಿಯಲ್ಲಿದ್ದಾನೆ.
ಕತಾರ್‌ನಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯಲ್ಲಿ ಶೇರ್ ಮೊಹಮ್ಮದ್ ಅಬ್ಬಾದ್ ನನ್ನು ಭೇಟಿ ಮಾಡಿದ್ದ ದೀಪಕ್ ಮಿತ್ತಲ್, ತಾಲಿಬಾನ್‌ನ ಜೊತೆಗೆ ಭಾರತವೂ ರಾಜತಾಂತ್ರಿಕ ಸಂಪರ್ಕ ಸಾಧಿಸಿದ್ದ ವಿಚಾರ ತಿಳಿಸಿದ್ದಾರೆ.
ಕೋವಿಡ್-19 ನಿಂದ ಲೈಂಗಿಕ ಸಾಮರ್ಥ್ಯ ಕುಸಿತ….?
ಶೇರ್ ಮೊಹಮ್ಮದ್ ಅಬ್ಬಾದ್ ಡೆಹ್ರಾಡೂನ್‌ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಉನ್ನತ ತರಬೇತಿ ಪೂರೈಸಿದ್ದಾನೆ. ಭಾರತೀಯ ಮಿಲಿಟರಿ ಸಂಸ್ಥೆ ತನ್ನ ದ್ವಾರವನ್ನು ಅಫ್ಘಾನಿಗಳ ಪಾಲಿಗೆ ತೆರೆದಾಗ, ಭಾರತೀಯ ಸೇನಾ ಅಕಾಡೆಮಿ ಸೇರಿದ ಶೇರ್ ಮೊಹಮದ್ ಸ್ಟಾನಿಕ್ಝಾಯಿ ಒಂದೂವರೆ ವರ್ಷಗಳ ಕಾಲ ತರಬೇತಿ ಪಡೆದಿದ್ದ.
ಆ ದಿನಗಳಲ್ಲಿ ಶೇರ್ ಮೊಹಮದ್ ಖಂಡಿತವಾಗಿಯೂ ಮೂಲಭೂತವಾದಿ ದೃಷ್ಟಿಕೋನ ಹೊಂದಿರಲಿಲ್ಲ ಎಂದು ನಿವೃತ್ತ ಮೇಜರ್ ಜನರಲ್ ಡಿ.ಎ. ಚತುರ್ವೇದಿ, ಈ ಕುರಿತು ತಮಗೆ ನೆನಪಿದ್ದ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿರುವ ಸ್ಟಾನಿಕ್‌ಜ಼ಾಯ್ ಜಗತ್ತಿನ ಉದ್ದಗಲಕ್ಕೂ ಸಂಚರಿಸಿದ್ದಾನೆ. 1996ರಲ್ಲಿ ತಾಲಿಬಾನ್ ಹಿಡಿತದಲ್ಲಿ ಅಫ್ಘಾನಿಸ್ತಾನ ಇದ್ದ ವೇಳೆ ವಾಷಿಂಗ್ಟನ್ ಡಿಸಿಗೆ ಭೇಟಿ ಕೊಟ್ಟಿದ್ದ ಶೇರ್ ಮೊಹಮ್ಮದ್ ಅಬ್ಬಾದ್ ತಾಲಿಬಾನ್ ಸರ್ಕಾರಕ್ಕೆ ಅಮೆರಿಕ ಸರ್ಕಾರ ಅಧಿಕೃತವಾಗಿ ಮನ್ನಣೆ ಕೊಡಬೇಕೆಂದು ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್‌ರನ್ನು ಕೋರಿಕೊಂಡಿದ್ದ.