alex Certify ಅಮೆರಿಕನ್ ನಿರ್ಮಿತ ಶಸ್ತ್ರಸಜ್ಜಿತ ವಾಹನಗಳನ್ನೇ ಬಳಸಿ ಕಾಬೂಲ್ ನಲ್ಲಿ ಪರೇಡ್ ನಡೆಸಿದ ತಾಲಿಬಾನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕನ್ ನಿರ್ಮಿತ ಶಸ್ತ್ರಸಜ್ಜಿತ ವಾಹನಗಳನ್ನೇ ಬಳಸಿ ಕಾಬೂಲ್ ನಲ್ಲಿ ಪರೇಡ್ ನಡೆಸಿದ ತಾಲಿಬಾನ್…!

ಈ ಹಿಂದೆ ಅಮೆರಿಕಾದ ಪಡೆ ಬಳಸುತ್ತಿದ್ದ, ಅಮೆರಿಕನ್ ನಿರ್ಮಿತ ಶಸ್ತ್ರಸಜ್ಜಿತ ವಾಹನಗಳಲ್ಲಿ ತಾಲಿಬಾನ್ ಪಡೆ ಭಾನುವಾರ ಕಾಬೂಲ್‌ನಲ್ಲಿ ಮಿಲಿಟರಿ ಪರೇಡ್ ನಡೆಸಿದೆ.‌

ಈ ಹಿಂದೆ ಅಫ್ಘಾನ್ ನಲ್ಲಿ, ಅಮೆರಿಕಾದ ಬೆಂಬಲದಿಂದ ರಚಿಸಿದ್ದ ಸರ್ಕಾರ ಆಗಸ್ಟ್‌ನಲ್ಲಿ ಪತನಗೊಂಡಿತು. ಆಗ ಅಮೆರಿಕನ್ ಬಿಟ್ಟು ಹೋದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನೇ ಈಗ ತಾಲಿಬಾನ್ ಪಡೆಗಳು ಬಳಸುತ್ತಿವೆ.

ಹೊಸದಾಗಿ ತರಬೇತಿ ಪಡೆದ 250 ಸೈನಿಕರ ಪದವಿಗೆ ಸಂಬಂಧಿಸಿದಂತೆ ಪರೇಡ್ ಮೂಲಕ ಸಂಭ್ರಮಾಚರಣೆ ನಡೆಸಲಾಗಿದೆ ಎಂದು ತಾಲಿಬಾನ್ ಸರ್ಕಾರದ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಾಜ್ಮಿ ಹೇಳಿದ್ದಾರೆ.

ಗಮನಾರ್ಹ ಅಂಶವೆಂದರೆ ಈ ಪರೇಡ್ ನಲ್ಲಿ ಬಳಸಿದ ವಾಹನಗಳು, ಶಸ್ತ್ರಾಸ್ತ್ರಗಳೆಲ್ಲಾ ಈ ಹಿಂದೆ ಅಪ್ಘಾನ್ ನಲ್ಲಿ ಬೀಡು ಬಿಟ್ಟಿದ್ದ ಅಮೆರಿಕಾ ಪಡೆ ಬಳಸುತ್ತಿತ್ತು. ಪರೇಡ್ ನಲ್ಲಿ US-ನಿರ್ಮಿತ M117 ಶಸ್ತ್ರಸಜ್ಜಿತ ಭದ್ರತಾ ವಾಹನಗಳನ್ನು ಬಳಸಲಾಗಿದ್ದು, MI-17 ಹೆಲಿಕಾಪ್ಟರ್‌ಗಳು ವಾಹನದ ಜೊತೆ ಜೊತೆಗೆ ಆಕಾಶದಲ್ಲಿ ಗಸ್ತು ತಿರುಗುತ್ತಿದ್ದವು. ರಾಜಧಾನಿ ಕಾಬೂಲ್ ನ ಪ್ರಮುಖ ರಸ್ತೆಯಲ್ಲಿ ತಾಲಿಬಾನ್ ಪಡೆ ನಿಧಾನವಾಗಿ ಚಲಿಸುತ್ತಾ ಪರೇಡ್ ನಡೆಸಿದೆ‌. ಪರೇಡ್ ನಲ್ಲಿದ್ದ ಅನೇಕ ಸೈನಿಕರು ಅಮೆರಿಕನ್ ನಿರ್ಮಿತ-M4 ಅಸಾಲ್ಟ್ ರೈಫಲ್ಗಳನ್ನು ಹಿಡಿದುಕೊಂಡಿದ್ದರು.

ತಾಲಿಬಾನ್ ವಿರುದ್ಧ ಹೋರಾಡುವ ಸಾಮರ್ಥ್ಯ ಅಫ್ಘಾನಿಸ್ತಾನಕ್ಕೆ ಬರಲಿ ಎಂದು, ಅಮೆರಿಕಾ ಅಫ್ಘಾನ್ ರಾಷ್ಟ್ರೀಯ ಪಡೆಯನ್ನು ನಿರ್ಮಿಸುವ ಪ್ರಯತ್ನದಲ್ಲಿ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನ ಸರಬರಾಜು ಮಾಡಿತ್ತು. ಆದರೆ ಈಗ ಅದೇ ತಾಲಿಬಾನಿಗಳು ಈ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನ ಬಳಸುತ್ತಿದ್ದಾರೆ.

ಅಫ್ಘಾನಿಸ್ತಾನ ಪುನರ್ನಿರ್ಮಾಣದ ವಿಶೇಷ ಇನ್ಸ್‌ಪೆಕ್ಟರ್ ಜನರಲ್ ಕಳೆದ ವರ್ಷ ನೀಡಿದ ವರದಿಯ ಪ್ರಕಾರ, ಅಮೆರಿಕಾ ಸರ್ಕಾರವು 2002 ರಿಂದ 2017ರವರೆಗೆ, 28 ಡಾಲರ್ ಶತಕೋಟಿ ಮೌಲ್ಯದ ರಕ್ಷಣಾ ವ್ಯವಸ್ಥೆ, ಸೇವೆ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ವಾಹನಗಳು, ನೈಟ್ ವಿಷನ್ ಸಾಧನಗಳು ಸೇರಿದಂತೆ ಅನೇಕ‌ ಮಿಲಿಟರಿ ಉಪಕರಣಗಳನ್ನ ಆಫ್ಘನ್ ಸರ್ಕಾರಕ್ಕೆ ವರ್ಗಾಯಿಸಿತ್ತು. ಯಾರ ವಿರುದ್ಧ ಹೋರಾಡಲು ಅಮೆರಿಕಾ ಅಫ್ಘಾನ್ ಸರ್ಕಾರಕ್ಕೆ ಸೌಲಭ್ಯ ನೀಡಿತ್ತು, ಅವರೆ ಈಗ ಅವುಗಳನ್ನ ಬಳಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...