ಅಫ್ಘಾನಿಸ್ತಾನದ ಪಶ್ಚಿಮದಲ್ಲಿರುವ ಹೇರತ್ ನಗರದಲ್ಲಿ ನಾಲ್ವರು ಅಪಹರಣಕಾರರನ್ನು ಕೊಂದು ಅವರ ದೇಹಗಳನ್ನು ಕ್ರೇನ್ಗೆ ನೇತು ಹಾಕಿದ ತಾಲಿಬಾನ್ ಮತ್ತೊಮ್ಮೆ ತನ್ನ ಬರ್ಬರತೆಯಿಂದ ಸುದ್ದಿ ಮಾಡಿದೆ.
ಅಪಹರಣಗಳನ್ನು ತಾಲಿಬಾನ್ ಸಹಿಸುವುದಿಲ್ಲ ಎಂದು ಪಾಠ ಕಲಿಸಲು ಹೀಗೆ ಮಾಡಲಾಗಿದೆ ಎಂದು ಹೇರತ್ ಪ್ರಾಂತ್ಯದ ಉಪ ರಾಜ್ಯಪಾಲ ಶಿರ್ ಅಹಮದ್ ಮುಹಾಜಿರ್ ತಿಳಿಸಿದ್ದಾರೆ.
ಗಾಯನ ಗಾರುಡಿಗನ ಸ್ಮರಣೆ: ಎಸ್.ಪಿ.ಬಿ. ಗೆ ನಮನ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ ರಕ್ತಸಿಕ್ತವಾದ ನಾಲ್ವರ ದೇಹಗಳು ಹಾಗೂ ಒಬ್ಬನ ದೇಹವನ್ನು ಎತ್ತುತ್ತಿರುವ ಕ್ರೇನ್ನ ಚಿತ್ರವನ್ನು ತೋರಲಾಗಿದೆ. ಶಸ್ತ್ರಸಜ್ಜಿತ ತಾಲಿಬಾನಿಗಳು ಟ್ರಕ್ ಸುತ್ತಲೂ ಓಡಾಡುತ್ತಿದ್ದರೆ ಸುತ್ತಲೂ ಇದ್ದ ಜನಸಮೂಹ ತಮ್ಮೆದುರು ಜರುಗುತ್ತಿರುವ ದೃಶ್ಯಕ್ಕೆ ಸಾಕ್ಷಿಯಾಗಿತ್ತು.
ತಾಲಿಬಾನ್ ತನ್ನ ಕ್ರೌರ್ಯದ ಮೂಲಕವೇ ಜಗತ್ತಿನ ಗಮನ ಸೆಳೆಯುತ್ತಿದ್ದು, ಈಗ ಅಪಹರಣಕಾರರ ವಿಚಾರದಲ್ಲಿ ಕೈಗೊಂಡ ಕ್ರಮ ವಿಶ್ವದ ಗಮನ ಸೆಳೆದಿದೆ. ಅಲ್ಲದೆ ತಾಲಿಬಾನ್ ನ ಪ್ರತಿಯೊಂದು ನಡೆಯನ್ನು ಪ್ರಮುಖ ದೇಶಗಳು ಗಮನಿಸುತ್ತಿವೆ.