ಅಫ್ಘಾನಿಸ್ತಾನ, ತಾಲಿಬಾನ್ ವಶವಾದ ಬಳಿಕ ಅಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳ ಕುರಿತು ಒಂದೊಂದೇ ಸಂಗತಿಗಳು ಬಹಿರಂಗವಾಗುತ್ತಿವೆ. ತಾಲಿಬಾನಿಗಳ ಕಪಿಮುಷ್ಟಿಯಿಂದ ಪಾರಾಗಲು ನಾಗರಿಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಇದರ ಮಧ್ಯೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿ ಬಂದಿರುವ ಮಹಿಳೆಯೊಬ್ಬರು ನಾಗರಿಕ ಸಮಾಜವೇ ಬೆಚ್ಚಿ ಬೀಳಿಸುವಂತಹ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಮುಸ್ಕಾನ್ ಎಂಬವರು ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
BIG NEWS: ಮೀಸಲಾತಿ ಕೆನೆಪದರ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ತಾಲಿಬಾನ್ ಉಗ್ರರು ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು ಯುವತಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದಾರಲ್ಲದೆ, ದಾಳಿಯಲ್ಲಿ ಮೃತರಾದ ಹೆಣ್ಣು ಮಕ್ಕಳ ಶವಗಳನ್ನೂ ಬಿಡುತ್ತಿಲ್ಲ. ಶವಗಳ ಮೇಲೂ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಮುಸ್ಕಾನ್ ತಿಳಿಸಿದ್ದಾರೆ. ಅವರುಗಳಿಗೆ ಹೆಣ್ಣುಮಕ್ಕಳು ಜೀವಂತವಾಗಿ ಇರಬೇಕೆಂದೇನೂ ಇಲ್ಲ ಎಂದು ಹೇಳುವ ಮೂಲಕ ತಾಲಿಬಾನಿಗಳ ಕ್ರೌರ್ಯವನ್ನು ಮುಸ್ಕಾನ್ ತೆರೆದಿಟ್ಟಿದ್ದಾರೆ.