ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ತಾಲಿಬಾನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಷ್ಟು ದಿನಗಳ ಕಾಲ ಕಾಬೂಲ್ ಏರ್ ಪೋರ್ಟ್ ಅನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅಮೆರಿಕ ಯೋಧರು ನಿನ್ನೆ ತಡರಾತ್ರಿ ಜಾಗ ಖಾಲಿ ಮಾಡಿದ್ದಾರೆ.
ಗಡುವು ಮುಗಿಯುವ ಮೊದಲೇ ಅಮೆರಿಕ ಸೇನೆ ವಾಪಸ್ ತೆರಳಿದೆ. ರಾತ್ರಿ ಅಮೆರಿಕದ ಮೂರು ವಿಮಾನಗಳಲ್ಲಿ ಯೋಧರನ್ನು ಸ್ಥಳಾಂತರ ಮಾಡಲಾಗಿದೆ. ಇದರೊಂದಿಗೆ ತಾಲಿಬಾನ್ ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಆಗಸ್ಟ್ 31 ರೊಳಗೆ ಅಮೆರಿಕ ಯೋಧರು ಕಾಬೂಲ್ ಏರ್ಪೋರ್ಟ್ ಖಾಲಿ ಮಾಡಬೇಕು, ಅಮೆರಿದವರು ದೇಶ ತೊರೆಯಬೇಕೆಂದು ತಾಲಿಬಾನ್ ಉಗ್ರರು ತಾಕೀತು ಮಾಡಿದ್ದರು. ಇಂದು ರಾತ್ರಿಯವರೆಗೂ ಸಮಯವಿದ್ದರೂ, ನಿನ್ನೆ ರಾತ್ರಿಯೇ ಅಮೆರಿಕ ಯೋಧರನ್ನು ಸ್ಥಳಾಂತರ ಮಾಡಲಾಗಿದೆ.