alex Certify ಅಪ್ಘಾನಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ: ತಿನ್ನಲು ಗತಿಯಿಲ್ಲದೇ ಬಳಲುತ್ತಿದ್ದಾರೆ ತಾಲಿಬಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಘಾನಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ: ತಿನ್ನಲು ಗತಿಯಿಲ್ಲದೇ ಬಳಲುತ್ತಿದ್ದಾರೆ ತಾಲಿಬಾನಿಗಳು

ಅಫ್ಘಾನಿಸ್ತಾನದ ಮುಖ್ಯ ಪಟ್ಟಣಗಳಿಂದ ದೂರ ಇರುವ ತಾಲಿಬಾನ್​ ಉಗ್ರರು ಆಹಾರ ಕೊರತೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ಮಲಗಲು ಟ್ರಕ್​ ಬಳಕೆ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಶ್ವ ಬ್ಯಾಂಕ್​​ನ ಪ್ರಕಾರ ಕಳೆದ ವರ್ಷ ಅಫ್ಘಾನಿಸ್ತಾನವು 42 ಪ್ರತಿಶತ ಜಿಡಿಪಿಯನ್ನು ಹೊಂದಿತ್ತು. ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಅಪ್ಘಾನಿಸ್ತಾನದಲ್ಲಿ ಬಡತನ ರೇಖೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ತಾಲಿಬಾನ್​ ದಬ್ಬಾಳಿಕೆಗೆ ನಡುಗಿ ದೇಶವನ್ನು ತೊರೆದಿದ್ದಾರೆ. ಇದಾದ ಬಳಿಕ ದೇಶವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ತಿಂಗಳಿನಿಂದ ತಾಲಿಬಾನ್​ ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್​ ವರದಿ ಮಾಡಿದೆ.

ಸ್ವೀಡನ್​, ಜರ್ಮನಿ ಹಾಗೂ ಫಿನ್​​ಲ್ಯಾಂಡ್​ ಅಫ್ಘಾನಿಸ್ತಾನಕ್ಕೆ ಈ ಹಿಂದೆ ನೀಡುತ್ತಿದ್ದ ಅಭಿವೃದ್ಧಿ ಸಹಾಯಗಳಿಗೆ ತಾತ್ಕಾಲಿಕ ಬ್ರೇಕ್​ ಹಾಕಿರೋದಾಗಿ ಹೇಳಿದೆ. ಅಪ್ಘಾನಿಸ್ತಾನವು ನಿರ್ಜಲೀಕರಣ ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಸಂಸ್ಥೆಯ ಆರೋಗ್ಯ ವಿಭಾಗವು ಈ ಹಿಂದೆ ಅಪ್ಘಾನಿಸ್ತಾನದಲ್ಲಿ ಆರೋಗ್ಯ ಸೇವೆಗಳನ್ನು ಮರುಪ್ರಾರಂಭಿಸಲು ಹಾಗೂ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಪ್ರವೇಶ ಕಲ್ಪಿಸುವಂತೆ ಮನವಿ ಮಾಡಿತ್ತು.

ಈ ನಡುವೆ ಜಿನಿವಾದಲ್ಲಿ ನಡೆದ ಸಮಾವೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಅಪ್ಘಾನಿಸ್ತಾನಕ್ಕೆ 1.2 ಬಿಲಿಯನ್​ ಡಾಲರ್​ ಸಹಾಯಹಸ್ತ ಘೋಷಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗಕ್ಕೆ ತಾಲಿಬಾನ್​ ಧನ್ಯವಾದ ಅರ್ಪಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...