ತನ್ನ ಎಂದಿನ ಅಟ್ಟಹಾಸ ಮುಂದುವರೆಸಿರುವ ತಾಲಿಬಾನ್, ಅಫ್ಘಾನಿಸ್ತಾನದ ಟಾಖರ್ ಪ್ರಾಂತ್ಯದ ವ್ಯಕ್ತಿಯೊಬ್ಬರು ಅಫ್ಘನ್ ಪ್ರತಿರೋಧ ಪಡೆಯ ಸದಸ್ಯರಾಗಿದ್ದಾರೆ ಎಂಬ ಶಂಕೆಯ ಮೇಲೆ ಆತನ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದೆ. ’ಪಂಜ್‌ಶಿರ್ ಅಬ್ಸರ್ವರ್’ ಹೆಸರಿನ ಸ್ವತಂತ್ರ ಮಾಧ್ಯಮ ಈ ಸುದ್ದಿಯನ್ನು ವರದಿ ಮಾಡಿದೆ.
“ಟಾಖರ್ ಪ್ರಾಂತ್ಯದಲ್ಲಿ ಕೊಲ್ಲಲಾದ ಮಗುವಿನ ತಂದೆ ತಾಲಿಬಾನೀ ಆಡಳಿತಕ್ಕೆ ಪ್ರತಿರೋಧ ಒಡ್ಡುತ್ತಿದ್ದ ಗುಂಪಿನ ಸದಸ್ಯರು ಎಂದು ಶಂಕಿಸಲಾಗಿದೆ,” ಎಂದು ಪಂಜ್‌ಶಿರ್ ಅಬ್ಸರ್ವರ್ ಟ್ವೀಟ್ ಒಂದರಲ್ಲಿ ತಿಳಿಸಿದೆ. ತನ್ನ ವಿರುದ್ಧ ದನಿ ಎತ್ತುವವರ ವಿರುದ್ಧ ಕ್ರೌರ್ಯ ಮೆರೆಯುತ್ತಿರುವ ತಾಲಿಬಾನ್‌ನ ಮತ್ತೊಂದು ಮುಖವನ್ನು ಈ ಘಟನೆ ತೋರಿದೆ.
BIG NEWS: ಸಿಂಧಗಿ ಕ್ಷೇತ್ರಕ್ಕೆ ಇಂದೇ ಜೆಡಿಎಸ್ ಅಭ್ಯರ್ಥಿ ಘೋಷಣೆ ಸಾಧ್ಯತೆ; ಉಪ ಚುನಾವಣೆ ನಮ್ಮ ಪಕ್ಷಕ್ಕೆ ಸಿದ್ಧತಾ ಪರೀಕ್ಷೆ ಎಂದ HDK
ಜಾಗತಿಕ ಸಮುದಾಯದ ಎದುರು ತಾನು ಬದಲಾಗಿರುವುದಾಗಿ ತೋರಿಸಿಕೊಳ್ಳಲು ಯತ್ನಿಸುತ್ತಿರುವ ತಾಲಿಬಾನ್ ಇತ್ತ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕರನ್ನು ಯಾವ ಮಟ್ಟದಲ್ಲಿ ಭೀತಿಯಲ್ಲಿ ಇರಿಸಿದೆ ಎಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿನ ದೃಶ್ಯಗಳು ಸಾರಿ ಹೇಳುತ್ತಿದ್ದವು.
20 ವರ್ಷಗಳ ಬಳಿಕ ಅಫ್ಘಾನಿಸ್ತಾನದ ಚುಕ್ಕಾಣಿಯನ್ನು ಮತ್ತೆ ಹಿಡಿದಿರುವ ತಾಲಿಬಾನ್ ಅಧಿಕಾರದಲ್ಲಿ ಮಹಿಳೆಯರ ಪಾಡು ಹೇಗಿರುತ್ತದೋ ಎಂಬ ಬಗ್ಗೆ ಜಾಗತಿಕ ಸಮುದಾಯದಲ್ಲಿ ಕಳವಳ ವ್ಯಕ್ತವಾಗಿದೆ.