ಕಾಬೂಲ್: ಆಫ್ಘಾನಿಸ್ತಾನದ ಬಹುಭಾಗ ತಾಲಿಬಾನ್ ವಶದಲ್ಲಿದೆ. ಎಲ್ಲ ಅಫ್ಘಾನ್ ಗಡಿಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಕಾಬೂಲ್ ಹೊರವಲಯವನ್ನು ಪ್ರವೇಶಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ತಾಲಿಬಾನ್ ಮೂರು ಪ್ರಾಂತೀಯ ರಾಜಧಾನಿಗಳು ಮತ್ತು ಕನಿಷ್ಠ 10 ಜಿಲ್ಲೆಗಳನ್ನು ವಶಪಡಿಸಿಕೊಂಡಿವ ಉಗ್ರರು ಕಾಬೂಲ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರಾಜಧಾನಿ ಹೊರವಲಯದಲ್ಲಿ ಬೀಡುಬಿಟ್ಟಿದ್ದಾರೆ.
ಅಫ್ಘಾನಿಸ್ತಾನ ಬಿಕ್ಕಟ್ಟು:
ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್‌ನ ಹೆಚ್ಚಿನ ಭಾಗಗಳ ಮೇಲೆ ಹಿಡಿತ ಸಾಧಿಸಿದ ನಂತರ, ತಾಲಿಬಾನ್ ದಂಗೆಕೋರರು ದೇಶದ ರಾಜಧಾನಿ ಕಾಬೂಲ್‌ನ ಹೊರವಲಯವನ್ನು ಪ್ರವೇಶಿಸಿದ್ದಾರೆ. ಅಫ್ಘಾನ್ ಅಧಿಕಾರಿಗಳು ಮಾಹಿತಿ ನೀಡಿ, ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್‌ನ ಹೊರವಲಯವನ್ನು ಪ್ರವೇಶಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.