
ಸಂಗೀತಗಾರನೊಬ್ಬನ ಸಾಧನವೊಂದನ್ನು ತಾಲಿಬಾನಿಗಳು ಆತನ ಎದುರೇ ಸುಟ್ಟು ಹಾಕಿದ್ದು, ಸಂಗೀತಗಾರ ಕಣ್ಣೀರು ಹಾಕುತ್ತಿದ್ದರೆ, ಇದನ್ನು ಕಂಡು ತಾಲಿಬಾನಿಗಳು ನಗುತ್ತಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆ ಜಜೈಅರುಬ್ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಅಲ್ಲಿ ಈಗಾಗಲೇ ತಾಲಿಬಾನಿಗಳು ವಾಹನಗಳಲ್ಲಿ ಸಂಗೀತ ಹಾಕುವುದನ್ನು ನಿಷೇಧಿಸಿದ್ದಾರೆ. ಅಲ್ಲದೇ, ಸಭೆ- ಸಮಾರಂಭಗಳಲ್ಲಿ ಕೂಡ ಸಂಗೀತ ಹಾಕುವುನ್ನು ನಿಷೇಧಿಸಲಾಗಿದೆ. ಈಗಾಗಲೇ ತಾಲಿಬಾನಿಗಳಿಂದ ಹಲವು ಕ್ಷೇತ್ರಗಳಲ್ಲಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದ್ದು, ಜನರು ಪರಿತಪಿಸುವಂತಾಗಿದೆ.