ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಮುಂದುವರೆದಿದೆ. ಈಗಾಗಲೇ ಮಾಧ್ಯಮಗಳ ಮೇಲೆ ತಾಲಿಬಾನ್ ಹೊಸ ನಿರ್ಬಂಧಗಳನ್ನು ಹೇರಿದೆ. ಆದಾಗ್ಯೂ, ಕಾಬೂಲ್ ನಲ್ಲಿ ಮಹಿಳೆಯರ ಪ್ರತಿಭಟನಾ ಮೆರವಣಿಗೆಯನ್ನು ವರದಿ ಮಾಡಿದ್ದಕ್ಕಾಗಿ ಇಬ್ಬರು ಪತ್ರಕರ್ತರನ್ನು ಬಂಧಿಸಿ, ಹಿಂಸಿಸಲಾಗಿದೆ.
ಕಾಬೂಲ್ ಮೂಲದ ಮಾಧ್ಯಮ ಸಂಸ್ಥೆಯಾದ ಎಟಿಲಾತ್-ಇ ರೋಜ್ ನ ಪತ್ರಕರ್ತರಾದ ತಕಿ ದರಿಯಾಬಿ ಮತ್ತು ನೇಮತ್ ನಖ್ದಿಯನ್ನು ಎಂಬವರನ್ನು ತಾಲಿಬಾನಿಗಳು ಸೆಪ್ಟೆಂಬರ್ 7 ರಂದು ಬಂಧಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವರದಿಗಾರರು, ಕಾಬೂಲ್ ನಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಹಕ್ಕುಗಳ ಮೇಲಿನ ತಾಲಿಬಾನ್ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಯ ವರದಿ ಮಾಡುತ್ತಿದ್ದರು ಎನ್ನಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು ಮುಡಿಗೆ ಮತ್ತೊಂದು ಗರಿ
ವರದಿ ಪ್ರಕಾರ, ಇಬ್ಬರು ವರದಿಗಾರರನ್ನು ಬಂಧಿಸಿ, ಕಾಬೂಲ್ ನ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಿ, ಇಬ್ಬರಿಗೂ ತೀವ್ರವಾಗಿ ಹೊಡೆದಿದ್ದಾರೆ. ಸೆಪ್ಟೆಂಬರ್ 8ರಂದು ಇವರನ್ನು ಬಿಡುಗಡೆ ಮಾಡಲಾಯಿತು. ಬೆನ್ನು ಹಾಗೂ ಮುಖದ ಮೇಲೆ ತೀವ್ರವಾದ ಗಾಯವಾಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
“ತಾಲಿಬಾನ್ ದೌರ್ಜನ್ಯವೆಸಗುವುದನ್ನು ನಿಲ್ಲಿಸಬೇಕು. ನಿರ್ಬಂಧಗಳನ್ನು ಕೈ ಬಿಡಬೇಕು ಮತ್ತು ಪ್ರತಿಭಟನಾಕಾರರು ಹಾಗೂ ಪತ್ರಕರ್ತರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿರುವ ತಾಲಿಬಾನ್ ಉಗ್ರರಿಗೆ ಸೂಕ್ತ ಶಿಕ್ಷೆ ಜಾರಿಯಾಗಬೇಕು” ಎಂದು ಮಾನವ ಹಕ್ಕುಗಳ ಸದಸ್ಯರು ಒತ್ತಾಯಿಸಿದ್ದಾರೆ.