ಕಾಬೂಲ್: ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶವನ್ನೇ ಕಬ್ಜ ಮಾಡಿಕೊಂಡಿರುವ ತಾಲಿಬಾನ್ ಉಗ್ರರಿಗೆ ಪಂಜ್ ಶೇರ್ ಪ್ರಾಂತ್ಯ ಸಿಂಹಸ್ವಪ್ನವಾಗಿದೆ. ಈ ಪ್ರದೇಶವನ್ನು ಮಾತ್ರ ತಾಲಿಬಾನ್ ಉಗ್ರರಿಗೆ ವಶಕ್ಕೆ ಪಡೆಯಲು ಸಾಧ್ಯವಾಗ್ತಿಲ್ಲ.
ದಂಡೆತ್ತಿ ಬಂದ ತಾಲಿಬಾನ್ ಉಗ್ರರನ್ನು ಪಂಜ್ ಶೀರ್ ಪಡೆ ಹಿಮ್ಮೆಟ್ಟಿಸುತ್ತಿದ್ದು, ಸರಿಯಾಗೇ ತಿರುಗೇಟು ನೀಡುತ್ತಿದೆ. ಹೀಗಿದ್ದರೂ ತಾಲಿಬಾನ್ ಉಗ್ರರು ಮತ್ತೊಮ್ಮೆ ಪಂಜ್ ಶೀರ್ ಮೇಲೆ ದಾಳಿ ಮಾಡಲು ವಿಫಲ ಯತ್ನ ನಡೆಸಿದ್ದು, ಗೆರಿಲ್ಲಾ ವಾರ್ ಗೆ ಬೆಚ್ಚಿಬಿದ್ದಿದ್ದಾರೆ.
ಆಫ್ಘಾನಿಸ್ತಾನದ ಪಂಜಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್ ಭಯೋತ್ಪಾದಕರು ಬೇರೆ ಬೇರೆ ದಿಕ್ಕುಗಳಿಂದ ದಾಳಿ ಮಾಡಿದ್ದಾರೆ. ಕಣಿವೆ ಪ್ರದೇಶದಲ್ಲಿ ಪಂಜ್ ಶೀರ್ ಪ್ರಾಂತ್ಯದ ಹೊರವಲಯದಲ್ಲಿ ದಾಳಿ ಮಾಡಿದ್ದು, ತಾಲಿಬಾನ್ ದಾಳಿಯನ್ನು ಉತ್ತರ ಮೈತ್ರಿ ಪಡೆ ಹತ್ತಿಕ್ಕಿದೆ. ತಾಲಿಬಾನ್ ಉಗ್ರರು ಮತ್ತು ಉತ್ತರ ಮೈತ್ರಿ ಪಡೆಯ ನಡುವೆ ಘರ್ಷಣೆ ಮುಂದುವರೆದಿದೆ. ಪಂಜ್ ಶೀರ್ ನಾಯಕ ಅಹಮದ್ ಮಸೂದ್ ಆಪ್ತ ಮೂಲಗಳು ಮಾಹಿತಿ ನೀಡಿದ್ದು, ಘರ್ಷಣೆ ಮುಂದುವರೆದಿದೆ ಎಂದು ಹೇಳಲಾಗಿದೆ. ಆದರೆ ಇದುವರೆಗೂ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.