ರಾತ್ರೋರಾತ್ರಿ ಶ್ರೀಮಂತರಾಗಬೇಕೆಂದು ಬಯಸಿ ಬಹಳಷ್ಟು ಮಂದಿ ಲಾಟರಿ ಟಿಕೆಟ್ ಖರೀದಿಸುತ್ತಾರೆ. ಆದರೆ ಅದೃಷ್ಟ ಒಲಿಯುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಆದರೆ ಇಲ್ಲೊಂದು ಪ್ರಕರಣದಲ್ಲಿ ಲಾಟರಿ ಟಿಕೆಟ್ ಖರೀದಿಸಿದಾತನಿಗೆ ಬರೋಬ್ಬರಿ 70 ಲಕ್ಷ ರೂಪಾಯಿ ಬಹುಮಾನ ಬಂದರೂ ಈವರೆಗೂ ಅದನ್ನು ಪಡೆದುಕೊಳ್ಳಲು ಬಂದಿಲ್ಲ
ಇಂಥದೊಂದು ಘಟನೆ ಕರ್ನಾಟಕ – ಕೇರಳ ಗಡಿಭಾಗ ತಲಪಾಡಿಯಲ್ಲಿ ನಡೆದಿದ್ದು, ಅಲ್ಲಿನ ಅಮಲ್ ಕನಕದಾಸ ಎಂಬವರ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ್ದ ಎ.ಟಿ. 317545 ಲಾಟರಿ ಟಿಕೆಟಿಗೆ ಮೇ ಏಳರಂದು ನಡೆದಿದ್ದ ಅಕ್ಷಯ ಲಾಟರಿಯಲ್ಲಿ 70 ಲಕ್ಷ ರೂಪಾಯಿ ಬಂಪರ್ ಬಹುಮಾನ ಬಂದಿದೆ.
ಆದರೆ ಈ ಬಹುಮಾನ ಗೆದ್ದ ಅದೃಷ್ಟಶಾಲಿ ಅದನ್ನು ಪಡೆಯಲು ಈವರೆಗೂ ಕೂಡ ಲಾಟರಿ ಏಜೆನ್ಸಿಯನ್ನು ಅಥವಾ ಸಂಸ್ಥೆಯನ್ನು ಸಂಪರ್ಕಿಸಿಲ್ಲ. ಬಂಪರ್ ಬಹುಮಾನದ ಟಿಕೆಟ್ ಮಾರಾಟ ಮಾಡಿದ ಏಜೆನ್ಸಿಗೂ ಕಮಿಷನ್ ಸಿಗಲಿದ್ದು, ಆದರೆ ಲಾಟರಿ ವಿಜೇತ ಈವರೆಗೂ ಸಂಪರ್ಕಿಸದ ಕಾರಣ ಏಜೆನ್ಸಿಯವರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.