
ನದಿ ತೀರದಲ್ಲಿ ಹೋಟೆಲ್ ಬನಾರಸ್ ಕೋಠಿ ಹಾಗೂ ರಿವರ್ ಪ್ಯಾಲೇಸ್ ಎಂಬ ಎರಡು ಐಷಾರಾಮಿ ಹೋಟೆಲ್ ಗಳು ನಿರ್ಮಾಣವಾಗಿದ್ದು, ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದನ್ನು ತೆರವುಗೊಳಿಸುವಂತೆ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಬಾರಿ ನೋಟಿಸ್ ನೀಡಲಾಗಿತ್ತು.
ಅಂತಿಮವಾಗಿ ಬುಲ್ಡೋಜರ್ ಬಳಸಿ ಇವುಗಳನ್ನು ತೆರವುಗೊಳಿಸಲು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಈ ವೇಳೆ ಅಧಿಕಾರಿಗಳು ಹಾಗೂ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ನಡುವೆ ವಾಗ್ವಾದ ಆರಂಭವಾಗಿದೆ. ಅಂತಿಮವಾಗಿ ಇದು ವಿಕೋಪಕ್ಕೆ ತಿರುಗಿದ್ದು ಈ ಸಂದರ್ಭದಲ್ಲಿ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಅಲೋಕ್ ಕುಮಾರ್ ಹೋಟೆಲ್ ಮಾಲೀಕನಿಗೆ ಗೂಳಿಯಂತೆ ಗುದ್ದಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.