ಎಸಿಡಿಟಿ ಮಾಮೂಲಿ ಸಮಸ್ಯೆಯಂತೆ ಕಾಣುತ್ತೆ. ಹಾಗಾಗಿ ಇದನ್ನು ಅನೇಕರು ಆರಂಭದಲ್ಲಿ ನಿರ್ಲಕ್ಷಿಸಿಬಿಡ್ತಾರೆ. ಆದ್ರೆ ತಲೆ ನೋವು, ಆತಂಕ, ಚಡಪಡಿಕೆಯಂತ ಅನೇಕ ಸಮಸ್ಯೆಗೆ ಈ ಎಸಿಡಿಟಿ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಸಿಡಿಟಿಯಿಂದ ಬಳಲುವ ಮಂದಿ ವೈದ್ಯರ ಬಳಿ ಹೋಗುವುದಿಲ್ಲ. ಔಷಧಿ ಅಂಗಡಿಯಿಂದ ಮಾತ್ರೆ ತಂದು ನುಂಗ್ತಾರೆ. ಇಲ್ಲವೆ ಪಿಪಿಐ ಸೇವನೆ ಮಾಡ್ತಾರೆ.
ವೈದ್ಯರ ಸಲಹೆ ಪಡೆಯದೆ ಎಸಿಡಿಟಿಗೆ ಮಾತ್ರೆ ಸೇವನೆ ಮಾಡ್ತಿರುವವರು ನೀವಾಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಎಸಿಡಿಟಿ ನಿವಾರಣೆಗೆ ಸೇವನೆ ಮಾಡುವ ಈ ಮಾತ್ರೆ ನಿಮ್ಮ ಕಿಡ್ನಿ ಮೇಲೆ ದುಷ್ಪರಿಣಾಮ ಬೀರಲಿದೆ. ಸಂಶೋಧನೆಯೊಂದು ಈ ಆತಂಕಕಾರಿ ವಿಷಯವನ್ನು ಹೊರ ಹಾಕಿದೆ. ಅತಿ ಹೆಚ್ಚು ಮಾತ್ರೆ ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ ತಲೆದೋರುತ್ತದೆ.
ಪಿಪಿಐ ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಮೆಗ್ನಿಷಿಯಂ ಅಂಶ ಕಡಿಮೆಯಾಗುತ್ತದೆ. ರಕ್ತದ ಜೊತೆ ಕಿಡ್ನಿ ಮೇಲೂ ಇದು ಪರಿಣಾಮ ಬೀರುತ್ತದೆ. ಎಸಿಡಿಟಿಯಾಗ್ತಿದ್ದಂತೆ ಸುಸ್ತು ಕಾಣಿಸಿಕೊಳ್ಳುತ್ತದೆ. ಇದರಿಂದ ನೆಮ್ಮದಿ ಪಡೆಯಲು ಜನರು ಪಿಪಿಐ ಸೇವನೆ ಮಾಡ್ತಾರೆ. ಹೀಗೆ ಮಾಡುವ ಬದಲು ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಪಡೆಯುವುದು ಉತ್ತಮ.