alex Certify ಗರ್ಭಪಾತದ ಔಷಧಿಗಳ ಸೇವನೆ ಅಪಾಯಕಾರಿ; ಮಹಿಳೆಯರನ್ನು ಕಾಡಬಹುದು ಇಷ್ಟೆಲ್ಲಾ ಸಮಸ್ಯೆ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಪಾತದ ಔಷಧಿಗಳ ಸೇವನೆ ಅಪಾಯಕಾರಿ; ಮಹಿಳೆಯರನ್ನು ಕಾಡಬಹುದು ಇಷ್ಟೆಲ್ಲಾ ಸಮಸ್ಯೆ……!

ಅನೇಕ ಬಾರಿ ಮಹಿಳೆಯರು ಬೇಡದ ಗರ್ಭಧಾರಣೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಅನಗತ್ಯ ಗರ್ಭಧಾರಣೆಯ ಭಯವು ಕಾಡಲು ಪ್ರಾರಂಭಿಸುತ್ತದೆ. ಅನೇಕರು ಗರ್ಭಪಾತದ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದು ಎಷ್ಟು ಸುರಕ್ಷಿತ? ಆರೋಗ್ಯ ತಜ್ಞರ ಪ್ರಕಾರ ಗರ್ಭಪಾತವು ಮಹಿಳೆಯರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದುರ್ಬಲರನ್ನಾಗಿ ಮಾಡುತ್ತದೆ.

ಗರ್ಭಪಾತದ ಔಷಧಿಗಳು ಮೆಡಿಕಲ್ ಸ್ಟೋರ್‌ಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ವೈದ್ಯರನ್ನು ಸಂಪರ್ಕಿಸದೇ ಮಹಿಳೆಯರು ಅವುಗಳನ್ನು ಸೇವಿಸುತ್ತಾರೆ. ಈ ಔಷಧಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆ.

ಅತಿಯಾದ ರಕ್ತಸ್ರಾವ

ಗರ್ಭಪಾತದ ಮಾತ್ರೆಗಳ ಸೇವನೆಯಿಂದ ಕೆಲವೊಮ್ಮೆ ಅತಿಯಾದ ರಕ್ತಸ್ರಾವ ಉಂಟಾಗಬಹುದು. ಇದು ಗರ್ಭಾಶಯದ ಪದರಗಳನ್ನು ಹಾನಿಗೊಳಿಸುತ್ತದೆ ಮತ್ತು ಆಂತರಿಕ ರಕ್ತನಾಳಗಳನ್ನು ಒಡೆಯುತ್ತದೆ. ಪರಿಣಾಮ ರಕ್ತಸ್ರಾವ ಹೆಚ್ಚಾಗುತ್ತದೆ.ಅತಿಯಾದ ರಕ್ತಸ್ರಾವದಿಂದ  ದೇಹವು ದುರ್ಬಲಗೊಳ್ಳುತ್ತದೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಅನಿಯಮಿತ ರಕ್ತಸ್ರಾವವು ಅಸ್ವಸ್ಥತೆಗೆ ಕಾರಣವಾಗಬಹುದು. ಆದ್ದರಿಂದ ವೈದ್ಯರನ್ನು ಸಂಪರ್ಕಿಸದೆ ಗರ್ಭಪಾತದ ಮಾತ್ರೆಗಳನ್ನು ತೆಗೆದುಕೊಳ್ಳಬಾರದು.

ಸೋಂಕಿನ ಅಪಾಯ

ಗರ್ಭಪಾತದ ಮಾತ್ರೆಗಳ ಬಳಕೆಯು ಅಪಾಯಕಾರಿ ಸೋಂಕುಗಳಿಗೆ ಕಾರಣವಾಗಬಹುದು. ಗರ್ಭಪಾತದ ಸಮಯದಲ್ಲಿ ಶುಚಿತ್ವ ಮತ್ತು ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ ಅದು ಯೋನಿ ಸೋಂಕು, ಪೆಲ್ವಿಕ್ ಸೋಂಕು ಮತ್ತು ಸೆಪ್ಟಿಕ್‌ನಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇವು ಗರ್ಭಾಶಯ, ಅಂಡಾಶಯ ಮತ್ತು ಯೋನಿಯನ್ನು ಹಾನಿಗೊಳಿಸುತ್ತವೆ. ಇದರಿಂದಾಗಿ ಮಹಿಳೆಯರು ಭವಿಷ್ಯದಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಾನಸಿಕ ಒತ್ತಡ

ಗರ್ಭಪಾತವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಮಸ್ಯೆಗಳನ್ನು ಉಂಟುಮಾಡಬಹುದು. ಗರ್ಭಪಾತವು ಸುಲಭದ ನಿರ್ಧಾರವಲ್ಲ. ಈ ನಿರ್ಧಾರದ ನಂತರ ಮಹಿಳೆಯರು ಒತ್ತಡ, ಖಿನ್ನತೆ ಮತ್ತು ಮಾನಸಿಕ ನೋವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ  ಗರ್ಭಪಾತದ ಅಗತ್ಯವಿದ್ದಲ್ಲಿ ವೃತ್ತಿಪರರ ಸಹಾಯ  ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...