ನವದೆಹಲಿ: ದೇಶದಲ್ಲಿ ವಿವಿಧ ವಯೋಮಿತಿಯವರಿಗೆ ಕೊರೋನಾ ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು, ಬಹುತೇಕ ಕಡೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಕೊರತೆ ಕಂಡು ಬಂದಿದೆ.
ಕೊವ್ಯಾಕ್ಸಿನ್ ಲಸಿಕೆ ಕೊರತೆಯ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಲಸಿಕೆ ಉತ್ಪಾದಿಸಿ ಬಿಡುಗಡೆ ಮಾಡಲು ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಬ್ಯಾಚ್ ಗಳಲ್ಲಿ ತಯಾರಿಸಿ ಟೆಸ್ಟಿಂಗ್, ಬಿಡುಗಡೆಗೆ 120 ದಿನ ಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ತಂತ್ರಜ್ಞಾನ, ಡ್ರಗ್ಸ್ ನಿಯಮಗಳನ್ನು ಪಾಲಿಸುವುದನ್ನು ಅವಲಂಬಿಸಿದೆ. ಮಾರ್ಚ್ ನಲ್ಲಿ ಉತ್ಪಾದನೆ ಆರಂಭಿಸಿದ ಲಸಿಕೆಯನ್ನು ಜೂನ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೊವ್ಯಾಕ್ಸಿನ್ ಲಸಿಕೆ ಕೊರತೆ ಬಗ್ಗೆ ಭಾರತ್ ಬಯೋಟೆಕ್ ನಿಂದ ಸ್ಪಷ್ಟನೆ ನೀಡಲಾಗಿದೆ.