alex Certify ಕೆಲಸದ ಮಧ್ಯೆ ತೆಗೆದುಕೊಳ್ಳಿ ಮೈಕ್ರೋ ಬ್ರೇಕ್; ಫಿಟ್‌ ಆಗಿರುತ್ತದೆ ದೇಹ ಮತ್ತು ಮನಸ್ಸು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಮಧ್ಯೆ ತೆಗೆದುಕೊಳ್ಳಿ ಮೈಕ್ರೋ ಬ್ರೇಕ್; ಫಿಟ್‌ ಆಗಿರುತ್ತದೆ ದೇಹ ಮತ್ತು ಮನಸ್ಸು….!

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ. ಮನೆ ಮತ್ತು ಕಚೇರಿ ನಿರ್ವಹಣೆ ಜೊತೆಗೆ ಮಕ್ಕಳ ಜವಾಬ್ಧಾರಿ ಕೂಡ ಮಹಿಳೆಯರ ಹೆಗಲೇರಿರುತ್ತದೆ. ಬಿಡುವಿಲ್ಲದೆ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದು ಒತ್ತಡ ಮತ್ತು ಖಿನ್ನತೆಯನ್ನು ಹೆಚ್ಚಿಸಬಹುದು ಮತ್ತು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು. ಮೈಕ್ರೋ ಬ್ರೇಕ್‌, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಇದು ನಮ್ಮನ್ನು ರೀಚಾರ್ಜ್ ಮಾಡುವ ಮೂಲಕ ಗಮನ ಮತ್ತು ತ್ರಾಣ ಎರಡನ್ನೂ ಹೆಚ್ಚಿಸುತ್ತದೆ.

ಮೈಕ್ರೋ ಬ್ರೇಕ್ ಎಂದರೇನು ?

ಮೈಕ್ರೋ ಬ್ರೇಕ್‌ಗಳು ಎಂದರೆ ಸಣ್ಣ ಸಣ್ಣ ವಿರಾಮ. ಇವುಗಳನ್ನು ಕೆಲಸದ ನಡುವೆ ತೆಗೆದುಕೊಳ್ಳಲಾಗುತ್ತದೆ. ಇದು ಕೇವಲ 5 ನಿಮಿಷಗಳಷ್ಟೆ. ದೀರ್ಘ ವಿರಾಮಗಳು ಅಥವಾ ವಾರಾಂತ್ಯಗಳಿಗಿಂತ ಮೈಕ್ರೋ ಬ್ರೇಕ್‌ಗಳು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಇವು ಸಹಾಯ ಮಾಡುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಸೂಕ್ಷ್ಮ ವಿರಾಮಗಳು ಗಮನ ಮತ್ತು ಕೆಲಸದ ಸಾಮರ್ಥ್ಯ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತವೆ. ಆ 5 ನಿಮಿಷದ ವಿರಾಮದ ಸಮಯದಲ್ಲಿ ಸಂಗೀತವನ್ನು ಆಲಿಸಿ ಅಥವಾ ಸ್ನೇಹಿತರೊಂದಿಗೆ ಮಾತನಾಡಿ.

ಹೆಚ್ಚಿನ ಮಹಿಳೆಯರು ಪ್ರತಿಯೊಂದೂ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಒತ್ತಡದಲ್ಲಿರುತ್ತಾರೆ. ಇದು ಒತ್ತಡ ಮತ್ತು ಖಿನ್ನತೆ ಎರಡನ್ನೂ ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, 5 ನಿಮಿಷಗಳ ವಿರಾಮ ತೆಗೆದುಕೊಳ್ಳುವುದರಿಂದ  ಮನಸ್ಸು ನಿರಾಳವಾಗುತ್ತದೆ.

ಸತತವಾಗಿ ಕೆಲಸ ಮಾಡಿ ಆಯಾಸಗೊಂಡಾಗ ಸೃಜನಶೀಲತೆಯೂ ಹಾಳಾಗುತ್ತದೆ. ಮೆದುಳು ಸರಿಯಾಗಿ ಯೋಚಿಸುವುದಿಲ್ಲ. ಆಗ  ಸೃಜನಶೀಲತೆಯನ್ನು ಹೆಚ್ಚಿಸಲು ಮೈಕ್ರೋ ಬ್ರೇಕ್ ಉತ್ತಮ ಮಾರ್ಗವಾಗಿದೆ. ಇದು ಹೊಸ ಹೊಸ ಸಂಗತಿಗಳನ್ನು ಯೋಚಿಸಲು ಮನಸ್ಸನ್ನು ಶಕ್ತಗೊಳಿಸುತ್ತದೆ.

ಬಿಡುವಿಲ್ಲದೆ ಕೆಲಸ ಮಾಡುವುದರಿಂದ ಶಕ್ತಿಯೂ ಕಡಿಮೆಯಾಗುತ್ತದೆ. ಕಚೇರಿಯಲ್ಲಿ ಕುಳಿತುಕೊಳ್ಳುವ ಕೆಲಸವು ಬಹಳಷ್ಟು ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಮೈಕ್ರೋ ಬ್ರೇಕ್‌ ತೆಗೆದುಕೊಳ್ಳಬೇಕು. ಇದರಿಂದ ಹೃದಯ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ. ಮಧುಮೇಹದಂತಹ ಕಾಯಿಲೆಗಳನ್ನೂ ದೂರವಿಡಬಹುದು.

5 ನಿಮಿಷಗಳ ವಿರಾಮದಲ್ಲಿ ಕೆಲಸವನ್ನು ಬಿಟ್ಟು ಬೇರೆ ಏನನ್ನಾದರೂ ಮಾಡಿ. ವಾಕ್‌ ಕೂಡ ಮಾಡಬಹುದು. ಸಂಗೀತವನ್ನು ಆಲಿಸಿ. ಪ್ರತಿ 60 ನಿಮಿಷಕ್ಕೆ ಕನಿಷ್ಠ ಎರಡು ಬಾರಿ ಅಂದರೆ 1 ಗಂಟೆಗೆ 2 ಮೈಕ್ರೋ ಬ್ರೇಕ್‌ಗಳನ್ನು ತೆಗೆದುಕೊಳ್ಳುವುದು ಅತ್ಯಂತ ಪ್ರಯೋಜನಕಾರಿಯಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...