ಆರೋಗ್ಯಕರ ಉಗುರು ಸೌಂದರ್ಯಕ್ಕೆ ಮಾತ್ರ ಭೂಷಣವಲ್ಲ, ಇದು ಆರೋಗ್ಯ ಅತ್ಯುತ್ತಮವಾಗಿರುವ ಲಕ್ಷಣ. ವಿಟಮಿನ್ ಇ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಉಗುರಿನ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಉಗುರು ಬೆರಳಿನಿಂದ ಹೆಚ್ಚು ಉದ್ದಕ್ಕೆ ಬೆಳೆಯುವ ಮುನ್ನವೇ ಅದನ್ನು ಕತ್ತರಿಸಿರಿ. ಮನೆ ಕೆಲಸ ಮಾಡುವಾಗ ಕೊಳೆ ಅಥವಾ ತಿನಿಸು ಉಗುರಿನೊಳಗೆ ಹೋಗದಂತೆ ನೋಡಿಕೊಳ್ಳಿ. ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ಒಂದು ತುಂಡು ನಿಂಬೆ ಹಾಕಿ ಅದರಲ್ಲಿ ಹತ್ತು ನಿಮಿಷ ಕೈಗಳನ್ನು ಅದ್ದಿಡಿ. ಇದರಿಂದ ಉಗುರುಗಳ ಸಂದಿಯಲ್ಲಿ ಅವಿತ ಕೊಳೆಯೂ ದೂರವಾಗುತ್ತದೆ.
ಸಭೆ ಸಮಾರಂಭಗಳಿಗೆ ತೆರಳದಿರುವ ದಿನಗಳಲ್ಲಿ ಉಗುರಿಗೆ ನೇಲ್ ಪಾಲಿಶ್ ಹಚ್ಚದಿರಿ. ಹಾಗೇ ಉಗುರುಗಳಿಗೆ ಗಾಳಿಯಾಡಲು ಬಿಡಿ.
ಹೆಚ್ಚು ಹಣ್ಣು, ತರಕಾರಿ, ಹಾಲು ಪನೀರ್ ಗಳನ್ನು ಸೇವಿಸಿ. ಇದರಿಂದ ಕ್ಯಾಲ್ಸಿಯಂ ಕೊರತೆ ಆಗುವುದಿಲ್ಲ. ಉಗುರುಗಳ ಮೇಲೆ ಬಿಳಿ ಬಣ್ಣದ ಗೆರೆಗಳು ಕಾಣಿಸಿಕೊಂಡರೆ ಅದು ಕ್ಯಾಲ್ಸಿಯಂ ಕೊರತೆಯ ಸಂಕೇತ. ಹಾಗಾಗಿ ಸಾಕಷ್ಟು ಹಸಿರು ತರಕಾರಿಗಳನ್ನು ಸೇವಿಸಿ.