alex Certify ಹೀಗೆ ಮಾಡಿ ಅವಧಿ ಪೂರ್ವ ಜನಿಸಿದ ಮಗುವಿನ ಆರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ಅವಧಿ ಪೂರ್ವ ಜನಿಸಿದ ಮಗುವಿನ ಆರೈಕೆ

ನಿಗದಿತ ಅವಧಿಗಿಂತ ಮೊದಲೇ ಜನಿಸಿದ ಮಕ್ಕಳು ಇತರ ಮಕ್ಕಳಿಗಿಂತ ಬೆಳವಣಿಗೆಯಲ್ಲಿ ತುಸು ಹಿಂದಿರುತ್ತವೆ. ಆದರೆ ನವಜಾತ ಶಿಶುವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಬಹಳ ಮುಖ್ಯ.

ಬಹುತೇಕ ಆಸ್ಪತ್ರೆಗಳಲ್ಲಿ ಮಗುವಿನ ಪೂರ್ಣ ಬೆಳವಣಿಗೆ ಆಗುವ ತನಕ ವಿಶೇಷ ಆರೈಕೆ ಕೇಂದ್ರಗಳಲ್ಲಿಟ್ಟು ನೋಡಿಕೊಳ್ಳುತ್ತಾರೆ. ಮನೆಗೆ ಬಂದ ಬಳಿಕವೂ ಅದೇ ಎಚ್ಚರಿಕೆ ಬಹಳ ಮುಖ್ಯ. ಮಗುವಿನ ಕೋಣೆಯಲ್ಲಿ ಅನಗತ್ಯ ಮಾತು, ವ್ಯಕ್ತಿಗಳ ಆಗಮನಕ್ಕೆ ಅವಕಾಶ ಕೊಡದಿರಿ.

ಮಗು ಮಲಗಿರುವಾಗ ಸದ್ದು ಗದ್ದಲ ಮಾಡದಿರಿ. ಮಂದ ಬೆಳಕಿನಲ್ಲಿ ಬೆಚ್ಚಗಿನ ಪರಿಸರದಲ್ಲಿ ಮಗುವಿಗೆ ಮಲಗಲು ಅನುವು ಮಾಡಿಕೊಡಿ. ಆಗಾಗ ಹಾಲೂಡಿಸುತ್ತಿರಿ.

ಹಿತವಾದ ಆದರೆ ಹೆಚ್ಚು ಹೊತ್ತು ತೆಗೆದುಕೊಳ್ಳದ ರೀತಿಯಲ್ಲಿ ಸಣ್ಣ ಸ್ನಾನ ಮಾಡಿಸಿ. ನೀರು ಉಗುರು ಬೆಚ್ಚಗಿದ್ದರೂ ಸಾಕು. ಮೃದುವಾದ ಬಟ್ಟೆಯಿಂದ ಮೈ ಒರೆಸಿ ಬಿಟ್ಟರೂ ಸಾಕು.

ಮಗುವಿನೊಂದಿಗೆ ಅಂಟಿಕೊಂಡು ಮಲಗದಿರಿ. ಮಗುವಿನ ಪಕ್ಕ ದೊಡ್ಡ ತಲೆದಿಂಬು, ಬೆಡ್ ಶೀಟ್ ಇಡದಿರಿ. ಮಗ್ಗುಲಾಗಿ ಮಲಗಿಸುವ ಬದಲು ಸ್ವಚ್ಚವಾದ ಬಟ್ಟೆಯಿಂದ ಮಗುವಿನ ಕೈಗಳನ್ನು ಒಳಸೇರಿಸಿ ಕಟ್ಟಿ ಮಲಗಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...