ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. ಮೂಳೆಗಳನ್ನು ಆರೋಗ್ಯವಾಗಿಡಲು ವಿಟಮಿನ್ ಎ ಸಹಾಯಕವಾಗಿದೆ. ಸೋಂಕು ಬ್ಯಾಕ್ಟೀರಿಯಾ ಫಂಗಲ್ ಇನ್ಫೆಕ್ಷನ್ ನಿಂದ ರಕ್ಷಿಸುತ್ತದೆ.
ರಾತ್ರಿ ಕುರುಡುತನ, ಕಣ್ಣು ಒಣಗುವುದು ಮಕ್ಕಳಲ್ಲಿ ನ್ಯೂಮೋನಿಯ, ಟಿಬಿ, ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತದೆ. ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ವಿಟಮಿನ್ ಎ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿದರೆ ಒಳ್ಳೆಯದು.
ಯಾಕೆಂದರೆ ಹುಟ್ಟುವ ಮಗುವಿನ ಕಣ್ಣಿನ ದೃಷ್ಟಿ ಚೆನ್ನಾಗಿ ಇರುತ್ತದೆ. ಮೊಟ್ಟೆ, ಮೀನು, ಮಾಂಸ, ಬೆಣ್ಣೆ, ಪನ್ನೀರ್, ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪು, ಕ್ಯಾರೆಟ್, ಬೀಟ್ ರೂಟ್, ಟೊಮೆಟೊ, ಕೊತ್ತಂಬರಿ, ಬೀನ್ಸ್, ಕುಂಬಳಕಾಯಿಯಲ್ಲಿ ಇದು ಹೇರಳವಾಗಿದೆ.