ಮಕ್ಕಳಿಗೆ ಊಟವಾದ ಬಳಿಕ ಕೋಳಿನಿದ್ದೆ ಮಾಡಲು ಅವಕಾಶ ಕೊಡುತ್ತಾರೆ. ಊಟ ಮಾಡಿದ ತಕ್ಷಣ ಸಣ್ಣ ನಿದ್ದೆ ತೆಗೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?
ಮಧ್ಯಾಹ್ನ ಗಡದ್ದಾಗಿ ಊಟ ಮಾಡಿದ ಬಳಿಕ ಕಣ್ರೆಪ್ಪೆ ಎಳೆಯುವಷ್ಟು ನಿದ್ದೆ ಬರುವುದು ಖಚಿತ. ಅದಕ್ಕೆ 20 ನಿಮಿಷ ಸಣ್ಣ ನಿದ್ದೆ ಮಾಡಿದರೆ ದೇಹ ಹಾಗು ಮೆದುಳಿಗೆ ಒಳ್ಳೆಯದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ಬುದ್ದಿ ಶಕ್ತಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಮನಸ್ಥಿತಿಯನ್ನೂ ಉತ್ತಮ ಪಡಿಸುತ್ತದೆ.
ಕಚೇರಿಗಳಲ್ಲಿ ಕಾಡುವ ನಿದ್ದೆ ಹೋಗಲಾಡಿಸಲು ಚಹಾ ಕುಡಿಯುವುದು ಉತ್ತಮ. 30 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ದೇಹದಲ್ಲಿ ಅಲಸ್ಯ ಮತ್ತು ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ನಿದ್ದೆಯ ಅವಧಿ ಸಣ್ಣದಿರಲಿ.
ಕೌಶಲ್ಯ, ನೆನಪಿನ ಶಕ್ತಿ, ಕ್ರಿಯಾತ್ಮಕತೆ, ಮನೋಬಲ ಹೆಚ್ಚಳಕ್ಕೆ ಈ ನಿದ್ದೆ ಸಹಕಾರಿ. ಒತ್ತಡವನ್ನು ಕಡಿಮೆ ಮಾಡಿ ನಿಮಗೆ ಮತ್ತಷ್ಟು ಏಕಾಗ್ರತೆಯಿಂದ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ. ಬಳಲಿದ ಮೆದುಳಿಗೆ ಪುನಶ್ಚೇತನ ನೀಡುತ್ತದೆ.