
ನರೇಂದ್ರ ಮೋದಿ ಅವರಿಗೆ ದೇಶ – ವಿದೇಶಗಳ ಗಣ್ಯರು ಮಾತ್ರವಲ್ಲದೆ ಜನ ಸಾಮಾನ್ಯರು ಕೂಡ ಹುಟ್ಟು ಹಬ್ಬದ ಶುಭಾಶಯಗಳು ಕೋರಿ ಸಂದೇಶ ರವಾನಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಇದರ ಮಧ್ಯೆ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್, ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಸಂದೇಶ ಕಳುಹಿಸಿದ್ದು, ಬಿಡುವಿಲ್ಲದಂತೆ ಜನಸೇವೆಯಲ್ಲಿ ತೊಡಗಿರುವ ನೀವು ಜನ್ಮದಿನದ ಈ ದಿನವಾದರೂ ಬಿಡುವು ತೆಗೆದುಕೊಂಡು ಸಂಭ್ರಮಿಸಿ ಎಂದು ಹಾರೈಸಿದ್ದಾರೆ.