ನವದೆಹಲಿ: ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 125 ವರ್ಷ ವಯಸ್ಸಿನ ಯೋಗ ಪಟು ಮತ್ತು ಗುರು ಸ್ವಾಮಿ ಶಿವಾನಂದ ಅವರಿಗೆ ಸೋಮವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿವಾನಂದ ಅವರು ಬಹುಶಃ ದೇಶದ ಇತಿಹಾಸದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಹಿರಿಯರಾಗಿದ್ದಾರೆ. ಸುದ್ದಿ ಸಂಸ್ಥೆ ANI ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಪ್ರಶಸ್ತಿಯನ್ನು ಸ್ವೀಕರಿಸುವ ಮೊದಲು ಸ್ವಾಮಿ ಶಿವಾನಂದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕರಿಸುವುದನ್ನು ಕಾಣಬಹುದು.
‘ಯೋಗ ಸೇವಕ’ ಎಂದೇ ಖ್ಯಾತರಾದ ಸ್ವಾಮಿ ಶಿವಾನಂದರು ತಮ್ಮ ಸಾಧನೆ, ವಿನಯತೆಯಿಂದಲೇ ಗಮನಸೆಳೆದವರು. ಇದರ ಹೊರತಾಗಿಯೂ ಸೇವೆಗೆ ಹೆಸರಾಗಿದ್ದಾರೆ. ಅವರು ಮೂರು ದಶಕಗಳಿಂದ ಕಾಶಿಯ ಘಾಟ್ ಗಳಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಯೋಗ ಕಲಿಸುತ್ತಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಿವಾನಂದರ ಈ ನಡೆ ಭಾರತದ ನಿಜವಾದ ಸಂಸ್ಕೃತಿಯ ದ್ಯೋತಕ ಎಂದು ಬಣ್ಣಿಸಿದ್ದಾರೆ.