alex Certify BIG NEWS: ಕನ್ನಡೇತರರು ʼಕನ್ನಡʼ ಕಲಿಯಲು ಸರ್ಕಾರಿ ವೆಬ್ ಸೈಟ್ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕನ್ನಡೇತರರು ʼಕನ್ನಡʼ ಕಲಿಯಲು ಸರ್ಕಾರಿ ವೆಬ್ ಸೈಟ್ ಶುರು

ಇನ್ನು ಮುಂದೆ ಕರ್ನಾಟಕದಲ್ಲಿ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್ ನಲ್ಲಿ ಕನ್ನಡವನ್ನು ಕಲಿಯಬಹುದು. ಇವರು ಸರ್ಕಾರದ ಇ-ಕನ್ನಡ ಪೋರ್ಟಲ್ ಗೆ ಹೋಗಿ ಆನ್ ಲೈನ್ ತರಗತಿಗಳ ಮೂಲಕ ಕನ್ನಡವನ್ನು ಕಲಿಯಬಹುದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇ-ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ.

ಈ ಪೋರ್ಟಲ್ ನಲ್ಲಿ ಮುದ್ರಣ, ಆಡಿಯೋ ಮತ್ತು ವಿಡಿಯೋ ಮಾದರಿಯಲ್ಲಿ ತರಗತಿಗಳು ಮತ್ತು ಪಠ್ಯಗಳಿರುತ್ತವೆ. ekannada.karnataka.gov.in ಪೋರ್ಟಲ್ ನಲ್ಲಿ ಈ ಪಠ್ಯಗಳು ಲಭ್ಯವಿವೆ.

ಪ್ರೇಯಸಿಯನ್ನ ನೋಡಲು ಬಂದ ಪ್ರಿಯಕರ: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ನಂತರ ನಡೆದಿದ್ದೇನು….?

ಕನ್ನಡದಲ್ಲಿ ಶುಭಾಶಯಗಳನ್ನು ಹೇಳುವುದು, ಸಂಭಾಷಣೆಗಳು ಮತ್ತು ವಾಕ್ಯಗಳು ಸೇರಿದಂತೆ ಕನ್ನಡ ಭಾಷೆಯನ್ನು ಬಳಸಲು ಅಗತ್ಯವಾಗಿರುವ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಇದಲ್ಲದೇ, ಅಂತ್ಯದಲ್ಲಿ ಅಭ್ಯಾಸ ಪರಿಕರಗಳೂ ಇರಲಿದ್ದು, ಪಠ್ಯಗಳೆಲ್ಲವೂ ಉಚಿತವಾಗಿರಲಿವೆ ಮತ್ತು ಸ್ವಯಂ-ಕಲಿಕೆಗೆಂದೇ ವಿನ್ಯಾಸಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಲ್ಲಾ ಆಡಳಿತ ಸಾಫ್ಟ್ ವೇರ್ ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಸಂಬಂಧ ಸರ್ಕಾರ ಸದ್ಯದಲ್ಲಿಯೇ ಆದೇಶ ಹೊರಡಿಸಲಿದೆ. ಇದಕ್ಕೆಂದು ಕನ್ನಡದ ಟೆಂಪ್ಲೇಟ್ ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಎಲ್ಲಾ ಸಚಿವರ ಇಮೇಲ್ ವಿಳಾಸಗಳು ಕನ್ನಡದಲ್ಲಿಯೇ ಲಭ್ಯವಾಗಲಿವೆ. ಈ ಕನ್ನಡ ಇಮೇಲ್ ವಿಳಾಸಗಳನ್ನು ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಉದ್ಘಾಟಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Forskellen mellem de to katte: Kun et geni kunne svare Tre overraskende produkter Et synstestspil: Kan du finde Opskriftshemmeligheder afsløres: Erstatningsmuligheder for salatprodukter "Kun 1 % af