ಬಿ ರಾಜರತ್ನ ನಿರ್ದೇಶನದ ಷಣ್ಮುಖ ಜೈ ಅಭಿನಯದ ‘ತಾಜ್’ ಚಿತ್ರದ ಮೆಲೋಡಿ ಗೀತೆ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ”ಇನ್ನೇನಿದೆ” ಎಂಬ ಈ ಮೆಲೋಡಿ ಹಾಡಿಗೆ ರಜತ್ ಹೆಗಡೆ ಧ್ವನಿಯಾಗಿದ್ದು, ನಿರ್ದೇಶಕ ರಾಜರತ್ನ ಸಾಹಿತ್ಯ ಬರೆದಿದ್ದಾರೆ.
ನೈಜ ಘಟನಾಧಾರಿತ ಈ ಚಿತ್ರದಲ್ಲಿ ಷಣ್ಮುಖ ಜೈ ಹಾಗೂ ಅಪ್ಸರ ಪ್ರಮುಖ ಪಾತ್ರದಲ್ಲಿದ್ದು, ಶೋಭರಾಜ್, ಕಡ್ಡಿ ವಿಶ್ವ, ವರ್ಧನ್, ಪದ್ಮಾವಾಸಂತಿ, ಬಾಲರಾಜ್ ವಾಡಿ ಸೂರಜ್, ಹಾಗೂ ಪಟ್ರೆ ನಾಗರಾಜ್, ಉಳಿದ ತಾರಾಂಗಣದಲ್ಲಿದ್ದಾರೆ. ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಡ್ ಬ್ಯಾನರ್ ನಲ್ಲಿ ಶ್ರೀಮತಿ ಲಕ್ಷ್ಮಿ ಷಣ್ಮುಖ ಮತ್ತು ಯರಂಗಳ್ಳಿ ಮರಿಯಮ್ಮ ನಿರ್ಮಾಣ ಮಾಡಿದ್ದಾರೆ. ಶ್ರೀ ಜವಳಿ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಹಾಗೂ ಜೈ ಆರ್ಯ ನೃತ್ಯ ನಿರ್ದೇಶನವಿದೆ. ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆ ನೀಡಿದ್ದಾರೆ.