alex Certify ‌ʼತಾಜ್ ಮಹಲ್ʼ ನ ನೀರಿನ ಬಿಲ್, ಆಸ್ತಿ ತೆರಿಗೆ ಪಾವತಿಸಲು ನೋಟೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼತಾಜ್ ಮಹಲ್ʼ ನ ನೀರಿನ ಬಿಲ್, ಆಸ್ತಿ ತೆರಿಗೆ ಪಾವತಿಸಲು ನೋಟೀಸ್

ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಸುಪ್ರಸಿದ್ಧ ತಾಜ್ ಮಹಲ್ ನ ನೀರಿನ ಬಿಲ್, ಆಸ್ತಿ ತೆರಿಗೆ 1 ಕೋಟಿ ರೂಪಾಯಿಯಾಗಿದೆ. ಈ ಬಾಕಿ ಮೊತ್ತ ಪಾವತಿಸಬೇಕೆಂದು ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ (AMC) ಎಚ್ಚರಿಕೆಯನ್ನು ನೀಡಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ದೃಢಪಡಿಸಿದಂತೆ, ತಾಜ್ ಮಹಲ್‌ಗೆ ನೀರಿನ ತೆರಿಗೆಯಾಗಿ 1 ಕೋಟಿ ಮತ್ತು ಆಸ್ತಿ ತೆರಿಗೆಯಾಗಿ 1.4 ಲಕ್ಷ ರೂಪಾಯಿ ಕೇಳಲಾಗಿದೆ. ಬಿಲ್‌ಗಳು 2021-22 ಮತ್ತು 2022-23 ರ ಹಣಕಾಸು ವರ್ಷಕ್ಕೆ ಸೇರಿವೆ.

ಆಗ್ರಾ ಮುನ್ಸಿಪಲ್ ಕಾರ್ಪೊರೇಶನ್ ಎಎಸ್‌ಐಗೆ 15 ದಿನಗಳೊಳಗೆ ಬಾಕಿ ಇರುವ ಬಾಕಿಗಳನ್ನು ಪಾವತಿಸುವಂತೆ ಕೇಳಿದೆ. ಒಂದು ವೇಳೆ ಬಾಕಿ ಪಾವತಿಸದಿದ್ದರೆ ಆಸ್ತಿಯನ್ನು ಆಸ್ತಿಯನ್ನು ಲಗತ್ತಿಸುವುದಾಗಿ ಎಚ್ಚರಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಎಎಸ್‌ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ರಾಜ್ ಪಟೇಲ್, “ನೀರಿನ ತೆರಿಗೆ ಮತ್ತು ಆಸ್ತಿ ತೆರಿಗೆಗೆ ಒಂದು ನೋಟೀಸ್ ನೀಡಲಾಗಿದೆ. ಆಸ್ತಿ ತೆರಿಗೆ ಸುಮಾರು 1.40 ಲಕ್ಷ ರೂ. ಮತ್ತು ನೀರಿನ ತೆರಿಗೆ ಸುಮಾರು 1 ಕೋಟಿ ರೂ.ಆಗಿದೆ. ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸುವುದಿಲ್ಲ. ನೀರಿನ ವಾಣಿಜ್ಯ ಬಳಕೆ ಇಲ್ಲದ ಕಾರಣ ನಾವು ತೆರಿಗೆಯನ್ನು ಪಾವತಿಸಲು ಜವಾಬ್ದಾರರಾಗಿರುವುದಿಲ್ಲ. ಆವರಣದೊಳಗೆ ಹಸಿರು ಕಾಪಾಡಲು ನೀರನ್ನು ಬಳಸಲಾಗುತ್ತದೆ. ತಾಜ್ ಮಹಲ್‌ ಗೆ ನೀರು ಮತ್ತು ಆಸ್ತಿ ತೆರಿಗೆಗೆ ಸಂಬಂಧಿಸಿದ ಸೂಚನೆಗಳು ಮೊದಲ ಬಾರಿಗೆ ಸ್ವೀಕರಿಸಲಾಗಿದೆ. ಇದನ್ನು ತಪ್ಪಾಗಿ ಕಳುಹಿಸಿರಬಹುದು ಎಂದಿದ್ದಾರೆ.

ASI ಅಧಿಕಾರಿಗಳ ಪ್ರಕಾರ ತಾಜ್ ಮಹಲ್ ಅನ್ನು 1920 ರಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಯಿತು. ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ಸಹ ಸ್ಮಾರಕದ ಮೇಲೆ ಯಾವುದೇ ಆಸ್ತಿ ಅಥವಾ ನೀರಿನ ತೆರಿಗೆಯನ್ನು ವಿಧಿಸಿರಲಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...