alex Certify ಸ್ಥೂಲಕಾಯಿಯಾಗಿರುವ 2 ಪಾಂಡಾಗಳಿಗೆ ಕಠಿಣ ಪಥ್ಯ ಕ್ರಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಥೂಲಕಾಯಿಯಾಗಿರುವ 2 ಪಾಂಡಾಗಳಿಗೆ ಕಠಿಣ ಪಥ್ಯ ಕ್ರಮ….!

ದೇಹತೂಕದಲ್ಲಿ ಭಾರೀ ಏರಿಕೆ ಕಂಡು ಬಂದ ಕಾರಣ ಥೈವಾನ್ ತಾಯ್ಪೇ ಮೃಗಾಲಯದಲ್ಲಿರುವ ಎರಡು ಪಾಂಡಾಗಳನ್ನು ಕಠಿಣ ಪಥ್ಯಕ್ರಮಕ್ಕೆ ಒಳಪಡಿಸಲಾಗಿದೆ.

ಸ್ಥೂಲಕಾಯಿಗಳಾಗಿಬಿಟ್ಟ ಎರಡು ಹೆಣ್ಣು ಪಾಂಡಾಗಳಾದ ಯುವಾನ್ ಜ಼ಾಯ್ ಮತ್ತು ಯುವಾನ್ ಬಾವೋರನ್ನು ಹೀಗೆ ನೋಡಿಕೊಳ್ಳಲಾಗುತ್ತಿದೆ. ಈ ಪಾಂಡಾಗಳ ಹೆತ್ತವರನ್ನು ಚೀನಾ 2008ರಲ್ಲಿ ತಾಯ್ವಾನ್‌ಗೆ ಉಡುಗೊರೆಯಾಗಿ ಕೊಟ್ಟಿತ್ತು.

90 ವರ್ಷಗಳ ಬಳಿಕ ಜನಿಸಿದೆ ಈ ಅತ್ಯಂತ ಅಪರೂಪದ ಪ್ರಾಣಿ….!

ಒಂಬತ್ತು ವರ್ಷದ ಯುವಾನ್ ಜ಼ಾಯ್ ತನ್ನ ಅಪ್ಪನಷ್ಟೇ ತೂಕವಿದ್ದು 115 ಕೆಜಿ ತೂಗುತ್ತಿದೆ. ಇದರ ಸಹೋದರಿ ಯುವಾನ್ ಬಾವೋ ಬರೀ ಒಂದು ವರ್ಷ ವಯಸ್ಸಿಗೆಲ್ಲಾ 70 ಕೆಜಿ ತೂಕವಿದೆ.

ಹೆಣ್ಣು ಪಾಂಡಾಗೆ ಆರೋಗ್ಯಕರ ತೂಕವು 105-110 ಕೆಜಿಯಷ್ಟಿರುತ್ತದೆ. ಸ್ಥೂಲಕಾಯಿ ಪಾಂಡಾಗಳಲ್ಲಿ ಹೈಪರ್‌ಟೆನ್ಷನ್‌ ಮತ್ತು ಹೈಪರ್‌ಗ್ಲೇಸೇಮಿಯಾದಂಥ ಕಾಯಿಲೆಗಳು ಕಂಡು ಬರುತ್ತವೆ. ಇದರಿಂದ ಆರೋಗ್ಯ ಸಂಬಂಧಿ ಗಂಭೀರ ಸಮಸ್ಯೆಗಳು ಕಾಣುತ್ತವೆ.

ಆದರೆ ಸದ್ಯಕ್ಕೆ ಈ ಎರಡೂ ಪಾಂಡಾಗಳು ಆರೋಗ್ಯವಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದೇ ಇರಲಿ ಎಂದು ಮುನ್ನೆಚ್ಚರಿಕೆ ದೃಷ್ಟಿಯಿಂದ ಆರೋಗ್ಯಕರ ಪಥ್ಯಕ್ಕೆ ಎರಡೂ ಪಾಂಡಾಗಳನ್ನು ತರಲಾಗುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...