ತೈವಾನ್ ನಲ್ಲಿ ಸಾಕುಗಿಳಿಯೊಂದು ರಸ್ತೆಯಲ್ಲಿ ಜಾಗಿಂಗ್ ಮಾಡ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ್ದಕ್ಕೆ ಗಿಳಿಯ ಮಾಲೀಕನಿಗೆ 74 ಲಕ್ಷ ರೂಪಾಯಿ ದಂಡದೊಂದಿಗೆ 2 ತಿಂಗಳ ಸಜೆಯನ್ನ ವಿಧಿಸಲಾಗಿದೆ.
ಡಾ. ಲಿನ್ ಎಂದು ಗುರುತಿಸಲ್ಪಟ್ಟ ವೈದ್ಯರು ಸಿವಿಲ್ ದಾವೆ ಹೂಡಿ ನ್ಯಾಯಾಲಯದಲ್ಲಿ ಘಟನೆಯ ಸಾಕ್ಷ್ಯವನ್ನು ನೀಡಿದರು. ತೈವಾನ್‌ನ ಸೆಂಟ್ರಲ್ ನ್ಯೂಸ್ ಏಜೆನ್ಸಿಯ ಪ್ರಕಾರ, ಡಾ. ಲಿನ್ ಮೇಲೆ ಗಿಳಿ ದಾಳಿ ಮಾಡಿದೆ.
ಇದರಿಂದ ಕೆಳಗೆ ಬಿದ್ದ ಅವರ ಸೊಂಟದ ಕೀಲು ಮುರಿಯಿತು. ಈ ವೇಳೆ ಪದೇ ಪದೇ ರೆಕ್ಕೆಗಳನ್ನು ಬೀಸುವ ಮೂಲಕ ಅವರನ್ನು ಗಿಳಿ ಗಾಬರಿಗೊಳಿಸಿತು. “ಉದ್ದೇಶಪೂರ್ವಕವಲ್ಲದ ಗಾಯಗಳನ್ನು ಉಂಟುಮಾಡಿದ ಆರೋಪದ ಮೇಲೆ ಜೈಲು ಶಿಕ್ಷೆಯನ್ನು ನೀಡಲಾಗಿದೆ” ಎಂದು ಸುದ್ದಿವಾಹಿನಿಯೊಂದು ತಿಳಿಸಿದೆ.
ತೈವಾನ್‌ನ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕ ಡಾ. ಲಿನ್, ಗಿಳಿ ಮಾಲೀಕನ ಮೇಲೆ ದಾವೆ ಹೂಡಿ, ಗಾಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಕೆಲಸವನ್ನು ಬಿಡಬೇಕಾಯಿತೆಂದು ಅವರು ಹಣಕಾಸಿನ ಪರಿಹಾರವನ್ನು ಕೋರಿದ್ದರು.