ತೈವಾನ್ನಲ್ಲಿರುವ ಒಂದು ನರ್ಸಿಂಗ್ ಹೋಮ್ ತನ್ನ ಹಿರಿಯ ನಾಗರಿಕರಿಗೆ ಅಡಲ್ಟ್ ಶೋ ಪ್ರದರ್ಶಿಸಲು ಸ್ಟ್ರಿಪ್ಪರ್ ನೇಮಿಸಿದ್ದಕ್ಕಾಗಿ ಟೀಕೆಗೊಳಗಾಗಿದ್ದು, ಕೊನೆಗೆ ಕ್ಷಮೆಯಾಚಿಸಿದೆ.
ತೈವಾನ್ನ ನಿವೃತ್ತ ಸೇನಾ ಅಧಿಕಾರಿಗಳಿಗಾಗಿ ರಚಿಸಲಾದ ಸರ್ಕಾರಿ ಸೌಲಭ್ಯವಾದ ನರ್ಸಿಂಗ್ ಹೋಂನಲ್ಲಿ ಈ ಈವೆಂಟ್ ನಡೆದಿತ್ತು. ಚೀನೀ ಸಂಸ್ಕೃತಿಯಲ್ಲಿ ನಿರ್ಣಾಯಕ ಹಬ್ಬವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ನರ್ಸಿಂಗ್ ಹೋಮ್ ಗಾಲಿಕುರ್ಚಿಗಳಲ್ಲಿರುವ ವೃದ್ಧರನ್ನು ಮನರಂಜಿಸಲು ಸ್ಟ್ರಿಪ್ಪರ್ ಕರೆಸಿತ್ತು.
ಸ್ಟ್ರಿಪ್ಪರ್ ಬಳುಕುವ ತುಣುಕನ್ನು ಅಲ್ಲಿದ್ದವರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಡಿಮೆ ಬಟ್ಟೆ ಧರಿಸಿದ್ದ ಯುವತಿ ಅಲ್ಲಿದ್ದ ವೃದ್ಧರನ್ನು ಕೆರಳಿಸುವಂತೆ ನೃತ್ಯ ಮಾಡುವ, ಮೈಮಾಟ ಪ್ರದರ್ಶನ ಮಾಡುತ್ತಾಳೆ. ಹಲವಾರು ವೃದ್ಧರು ಗಾಲಿಕುರ್ಚಿಯಲ್ಲಿದ್ದು ತಾವು ಕುಳಿತುಕೊಂಡೇ ಚಪ್ಪಾಳೆ ತಟ್ಟುತ್ತಾರೆ, ನಗುತ್ತಾರೆ ಮತ್ತು ಕಾರ್ಯಕ್ರಮವನ್ನು ಆನಂದಿಸುತ್ತಾರೆ. ಹಿರಿಯ ನಾಗರಿಕರಲ್ಲಿ ಒಬ್ಬರು ಕಲಾವಿದರಿಂದ ಲ್ಯಾಪ್ ಡ್ಯಾನ್ಸ್ ಪಡೆಯುವುದನ್ನು ಸಹ ಕಾಣಬಹುದು.
ಈ ವಿಡಿಯೋ ಪೋಸ್ಟ್ನಿಂದ ನರ್ಸಿಂಗ್ ಹೋಮ್ ಭಾರಿ ಆಕ್ರೋಶಕ್ಕೆ ಒಳಗಾಯಿತು. ಬಳಿಕ ನರ್ಸಿಂಗ್ ಹೋಂ ವಕ್ತಾರರು ಕ್ಷಮೆಯಾಚಿಸಿದ್ದಾರೆ ಆದರೆ, ಕಾರ್ಯಕ್ರಮವನ್ನು ಆಯೋಜಿಸುವ ಹಿಂದಿನ ಉದ್ದೇಶವು ಕೇವಲ ನಿವಾಸಿಗಳಿಗೆ ಮನರಂಜನೆ ನೀಡುವುದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಮಿಡ್ ಆಡುಮನ್ ಉತ್ಸವದ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ, ಈ ಬಾರಿ ಹಿರಿಯ ನಿವಾಸಿಗಳ ಉತ್ಸಾಹವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗಿತ್ತು ಎಂದಿದ್ದಾರೆ.