ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ತೈವಾನ್ ನ ಟ್ರಕ್ ಚಾಲಕರಿಗೆ ಮಾದರಿಯಾಗಬಲ್ಲ ಶಿಕ್ಷೆಯೊಂದನ್ನು ಕೊಡಲಾಗಿದ್ದು, ಶವಾಗಾರದಲ್ಲಿ ಒಂದು ರಾತ್ರಿ ಮಟ್ಟಿಗೆ ಕೆಲಸ ಮಾಡಲು ಸೂಚಿಸುವ ಮೂಲಕ ’ಸಾವು’ ಎಂಬುದು ಎಷ್ಟು ಭೀಕರವಾಗಿರುತ್ತದೆ ಎಂದು ಅರಿವು ಮೂಡಿಸಲಾಗಿದೆ.
ಒಡ್ಡಿಟಿಸೆಂಟ್ರಲ್ ಪೋರ್ಟಲ್‌ನ ವರದಿ ಪ್ರಕಾರ, ಪಾನಮತ್ತರಾಗಿ ಟ್ರಕ್ ಚಲಾಯಿಸುತ್ತಿದ್ದ 11 ಚಾಲಕರನ್ನು ತೈವಾನ್ ಪೊಲೀಸರು ಬಂಧಿಸಿದ್ದು, ಇಲ್ಲಿನ ಆಸ್ಪತ್ರೆಯೊಂದನ್ನು ಅವರನ್ನು ಎಳೆದುಕೊಂಡು ಬಂದು ಶವಾಗಾರದ ಸ್ವಚ್ಛತೆ ನೋಡಿಕೊಳ್ಳುವ ಶಿಕ್ಷೆ ನೀಡಿದ್ದಾರೆ.
ಕೇವಲ 17 ಕಿ.ಮೀ. ದೂರದ ಪ್ರಯಾಣಕ್ಕೆ ಬರೋಬ್ಬರಿ 10 ಸಾವಿರ ರೂಪಾಯಿ ಕ್ಯಾಬ್ ಬಿಲ್…!
ಮಾಧ್ಯಮಗಳಲ್ಲಿ ವರದಿಯಾದ ಬಳಿಕ, ತೈವಾನ್ ನ ಕೋಶಿಯಾಂಗ್ ನಗರದ ಮೇಯರ್ ಈ ಸಂಬಂಧ ಸಾರ್ವಜನಿಕ ಘೋಷಣೆಯೊಂದನ್ನು ಮಾಡಿದ್ದು, ಇನ್ನು ಮುಂದೆ ಎಣ್ಣೆ ಹೊಡೆದು ಲಾರಿ ಓಡಿಸುವವರಿಗೆ ಇದೇ ಶಿಕ್ಷೆ ಕೊಡುವುದಾಗಿ ಹೇಳಿದ್ದಾರೆ.
ಪಾನಮತ್ತರಾಗಿ ವಾಹನ ಚಾಲನೆ ಮಾಡುವ ಮಂದಿಗೆ ಪ್ರತಿಯೊಂದು ದೇಶದಲ್ಲೂ ಬೇರೆ ಬೇರೆ ರೀತಿಯ ಶಿಕ್ಷೆ ನೀಡಲಾಗುತ್ತದೆ. ಆದರೆ ಹೀಗೊಂದು ಅನುಕರಣಿಯ ಶಿಕ್ಷೆಯನ್ನು ತೈವಾನ್ ಕೊಟ್ಟಿದ್ದು, ಇಂಥದ್ದೊಂದು ನಿದರ್ಶನ ಇದೇ ಮೊದಲನೆಯದ್ದಾಗಿದೆ.