ಟಾಕೋ ಬೆಲ್ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಡ್ಯೂಟಿಯ ಕೊನೆಯ ದಿನ ವಿಶಿಷ್ಟವಾದ ರೀತಿಯಲ್ಲಿ ಗುಡ್ ಬೈ ಹೇಳಲು ನಿರ್ಧರಿಸಿದ್ದಾನೆ.
ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ ‘ಪರಿಹಾರ’
ಡಿಟರ್ಜೆಂಟ್ನಿಂದ ತುಂಬಿದ್ದ ರೆಸ್ಟೋರೆಂಟ್ನ ಅಡುಗೆ ಮನೆಯ ಸಿಂಕ್ಗೆ ಜಿಗಿದ ಸ್ಟೀವನ್ ಪೌಲೆ ಹೆಸರಿನ 20ರ ಈ ಯುವಕನ ಈ ರೀತಿಯ ಗುಡ್ ಬೈ ಕಥೆ ವಿಡಿಯೋ ರೆಕಾರ್ಡ್ ಆಗಿದ್ದು, ಆನ್ಲೈನ್ನಲ್ಲಿ ವೈರಲ್ ಆಗಿದೆ.
ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ ‘ಪರಿಹಾರ’
ಫಾಸ್ಟ್ ಫುಡ್ ಬ್ರಾಂಡ್ನ ಪಶ್ಚಿಮ ವರ್ಜಿನಿಯಾ ಔಟ್ಲೆಟ್ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೀವನ್, ಪುಟ್ಟದೊಂದು ಏಣಿ ಮೇಲೆ ನಿಂತು ಕೆಲ ಕ್ಷಣ ಉಸಿರೆಳೆದುಕೊಂಡು, ಗಾಳಿಯಲ್ಲಿ ಜಿಗಿದು ಹಾಗೇ ಸಿಂಕ್ಗೆ ಬಿದ್ದಿದ್ದಾನೆ. ಪಾತ್ರೆಗಳಿಂದ ತುಂಬಿದ್ದ ನೊರೆಯುಕ್ತ ಸಿಂಕ್ನಿಂದ ಹೊರಬಂದ ಈತ ಕೈಯಲ್ಲಿ ಎರಡು ಚಮಚೆಗಳನ್ನು ಹಿಡಿದಿರುವುದನ್ನು ನೋಡಬಹುದಾಗಿದೆ.
https://youtu.be/Wqj6Lmn3iJs