ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್ ಅವರು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನವೆಂಬರ್ 30 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2022 ರ ಪಟ್ಟಿ ಪ್ರಕಟಿಸಿದ್ದು ಅಚಂತ ಶರತ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರೆ, ಶಟ್ಲರ್ಗಳಾದ ಲಕ್ಷ್ಯ ಸೇನ್, ಎಚ್ಎಸ್ ಪ್ರಣಯ್, ಮಹಿಳಾ ಬಾಕ್ಸರ್ ನಿಖತ್ ಜರೀನ್, ಅಥ್ಲೀಟ್ಗಳಾದ ಎಲ್ದೋಸ್ ಪಾಲ್, ಅವಿನಾಶ್ ಸೇಬಲ್ ಸೇರಿದಂತೆ ಒಟ್ಟು 25 ಕ್ರೀಡಾಪಟುಗಳು ಈ ವರ್ಷ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ:
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2022: ಅಚಂತ ಶರತ್ ಕಮಲ್.
ಅರ್ಜುನ ಪ್ರಶಸ್ತಿ: ಸೀಮಾ ಪುನಿಯಾ (ಅಥ್ಲೆಟಿಕ್ಸ್), ಎಲ್ದೋಸ್ ಪಾಲ್ (ಅಥ್ಲೆಟಿಕ್ಸ್), ಅವಿನಾಶ್ ಮುಕುಂದ್ ಸೇಬಲ್ (ಅಥ್ಲೆಟಿಕ್ಸ್), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್), ಎಚ್ ಎಸ್ ಪ್ರಣೋಯ್ (ಬ್ಯಾಡ್ಮಿಂಟನ್), ಅಮಿತ್ (ಬಾಕ್ಸಿಂಗ್), ನಿಖತ್ ಝರೀನ್ (ಬಾಕ್ಸಿಂಗ್), ಭಕ್ತಿ ಪ್ರದೀಪ್ ಕುಲಕರ್ಣಿ (ಚೆಸ್), ಆರ್ ಪ್ರಗ್ನಾನಂದಾ (ಚೆಸ್), ದೀಪ್ ಗ್ರೇಸ್ ಎಕ್ಕಾ (ಹಾಕಿ), ಶುಶೀಲಾ ದೇವಿ (ಜೂಡೋ), ಸಾಕ್ಷಿ ಕುಮಾರಿ (ಕಬಡ್ಡಿ), ನಯನ್ ಮೋನಿ ಸೈಕಿಯಾ (ಲಾನ್ ಬೌಲ್), ಸಾಗರ್ ಕೈಲಾಸ್ ಓವಲ್ಕರ್ (ಮಲ್ಲಕಂಬ) , ಎಲವೆನಿಲ್ ವಲರಿವನ್ (ಶೂಟಿಂಗ್), ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್), ಶ್ರೀಜಾ ಅಕುಲಾ (ಟೇಬಲ್ ಟೆನಿಸ್), ವಿಕಾಸ್ ಠಾಕೂರ್ (ವೇಟ್ಲಿಫ್ಟಿಂಗ್), ಅಂಶು (ಕುಸ್ತಿ), ಸರಿತಾ (ಕುಸ್ತಿ), ಪರ್ವೀನ್ (ವುಶು), ಮಾನಸಿ ಗಿರೀಶ್ಚಂದ್ರ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್), ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್), ಸ್ವಪ್ನಿಲ್ ಸಂಜಯ್ ಪಾಟೀಲ್ (ಪ್ಯಾರಾ ಈಜು), ಜೆರ್ಲಿನ್ ಅನಿಕಾ ಜೆ (ಪ್ಯಾರಾ ಬ್ಯಾಡ್ಮಿಂಟನ್).
ದ್ರೋಣಾಚಾರ್ಯ ಪ್ರಶಸ್ತಿ: ಜೀವನ್ಜೋತ್ ಸಿಂಗ್ ತೇಜಾ (ಆರ್ಚರಿ), ಮೊಹಮ್ಮದ್ ಅಲಿ ಕಮರ್ (ಬಾಕ್ಸಿಂಗ್), ಸುಮಾ ಸಿದ್ಧಾರ್ಥ್ ಶಿರೂರ್ (ಪ್ಯಾರಾ ಶೂಟಿಂಗ್), ಸುಜೀತ್ ಮಾನ್ (ಕುಸ್ತಿ).
ಜೀವಮಾನ ಸಾಧನೆ ಪ್ರಶಸ್ತಿ: ದಿನೇಶ್ ಜವಾಹರ್ ಲಾಡ್ (ಕ್ರಿಕೆಟ್), ಬಿಮಲ್ ಪ್ರಫುಲ್ಲ ಘೋಷ್ (ಫುಟ್ಬಾಲ್), ರಾಜ್ ಸಿಂಗ್ (ಕುಸ್ತಿ).
ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ 2022: ಅಶ್ವಿನಿ ಅಕ್ಕುಂಜಿ ಸಿ (ಅಥ್ಲೆಟಿಕ್ಸ್), ಧರಂವೀರ್ ಸಿಂಗ್ (ಹಾಕಿ), ಬಿ ಸಿ ಸುರೇಶ್ (ಕಬಡ್ಡಿ), ನಿರ್ ಬಹದ್ದೂರ್ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್).
ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ 2022: ಟ್ರಾನ್ಸ್ಸ್ಟೇಡಿಯಾ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಲಡಾಖ್ ಸ್ಕೀ ಮತ್ತು ಸ್ನೋಬೋರ್ಡ್ ಅಸೋಸಿಯೇಷನ್.
ಮೌಲಾನಾ ಅಬುಲ್ ಕಲಾಂ ಆಜಾದ್ (MAKA) ಟ್ರೋಫಿ 2022: ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ.