
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಳಿಕ ನಿನ್ನೆ ನ್ಯೂಯಾರ್ಕ್ ನಲ್ಲಿ ಮತ್ತೊಂದು ರೋಮಾಂಚನಕಾರಿ ಪಂದ್ಯ ನಡೆದಿದ್ದು, ದಕ್ಷಿಣ ಆಫ್ರಿಕಾ ತಂಡ ಕೇವಲ ನಾಲ್ಕು ರನ್ ಗಳಿಂದ ಬಾಂಗ್ಲಾದೇಶದ ಎದುರು ಜಯಭೇರಿ ಸಾಧಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ತನ್ನ ಜಯದ ಓಟವನ್ನು ಮುಂದುವರಿಸಿದೆ.
ಇಂದು ಟಿ ಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಕೆನಡಾ ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ತಂಡಕ್ಕೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ.
ಪಾಕಿಸ್ತಾನ ತಂಡ ಉಳಿದ ಎರಡು ಪಂದ್ಯಗಳಲ್ಲೂ ದೊಡ್ಡ ಅಂತರದಿಂದಲೇ ಗೆಲ್ಲಬೇಕಾಗಿದೆ. ಮತ್ತೊಂದೆಡೆ ಯುಎಸ್ಎ ತಂಡ ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡರೆ ಮಾತ್ರ ಪಾಕಿಸ್ತಾನಕ್ಕೆ ಸೂಪರ್ 8ಗೆ ಬರುವ ಅವಕಾಶ ಸಿಗಲಿದೆ.
ಕೆನಡಾ ತಂಡ ಕೂಡ ಇತ್ತೀಚಿಗಷ್ಟೇ ಐರ್ಲ್ಯಾಂಡ್ ಎದುರು ಜಯಭೇರಿ ಆಗಿದ್ದು, ಪಾಕಿಸ್ತಾನ ತಂಡಕ್ಕೆ ಇಂದು ಅಡ್ಡ ಗೋಡೆಯಾಗಿ ನಿಲ್ಲಲಿದೆಯಾ ಕಾದು ನೋಡಬೇಕಾಗಿದೆ.