ಟಿ-20 ವಿಶ್ವಕಪ್ ನಂತ್ರ ಐಸಿಸಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರರ ತಂಡ ಪ್ರಕಟಿಸಿದೆ. 12 ಆಟಗಾರರ ತಂಡದಲ್ಲಿ ಭಾರತದ ಒಬ್ಬ ಆಟಗಾರರೂ ಸ್ಥಾನ ಪಡೆದಿಲ್ಲ. ಐಸಿಸಿ, ತಂಡದ ನಾಯಕತ್ವವನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಮ್‌ಗೆ ವಹಿಸಿದೆ.
ಈ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಜೋಸ್ ಬಟ್ಲರ್ ಆರಂಭಿಕ ಆಟಗಾರಾಗಿದ್ದಾರೆ. ಟೂರ್ನಿಯುದ್ದಕ್ಕೂ ಈ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ ಬಟ್ಲರ್ ಏಕೈಕ ಶತಕ ದಾಖಲಿಸಿದ್ದಾರೆ. ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಚರಿತ್ ಅಸ್ಲಂಕಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಐದನೇ ಸ್ಥಾನದಲ್ಲಿ ಮತ್ತು ಇಂಗ್ಲೆಂಡ್‌ನ ಮೊಯಿನ್ ಅಲಿ ಆರನೇ ಸ್ಥಾನದಲ್ಲಿದ್ದಾರೆ. ಈ ಐಸಿಸಿ ತಂಡದಲ್ಲಿ ಏಷ್ಯಾದ 4 ಮಂದಿ ಮಾತ್ರ ಸ್ಥಾನ ಪಡೆದಿದ್ದಾರೆ.
ಇಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗದ ಬೌಲರ್ ಗಳಿಗೆ ಅವಕಾಶ ನೀಡಲಾಗಿದೆ. ಸ್ಪಿನ್ನರ್‌ಗಳಲ್ಲಿ ಶ್ರೀಲಂಕಾದ ವನಿಂದು ಹಸರಂಗ ಮತ್ತು ಆಡಮ್ ಝಂಪಾ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ವೇಗದ ಬೌಲರ್‌ಗಳಲ್ಲಿ ಜೋಸ್ ಹ್ಯಾಜಲ್‌ವುಡ್, ಟ್ರೆಂಟ್ ಬೌಲ್ಟ್ ಮತ್ತು ಆನ್ರಿಚ್ ನಾರ್ಟ್ಜೆ ಸೇರಿದ್ದಾರೆ. ಈ ತಂಡದ 12ನೇ ಆಟಗಾರರನ್ನಾಗಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಅವರನ್ನು ಐಸಿಸಿ ಆಯ್ಕೆ ಮಾಡಿದೆ.