
ಈ ಬಾರಿಯ t20 ವಿಶ್ವಕಪ್ ಪಂದ್ಯಗಳು ಒಂದಕ್ಕಿಂತ ಒಂದು ಭರ್ಜರಿ ಮನರಂಜನೆ ನೀಡುತ್ತಿದ್ದು, ಸಣ್ಣಪುಟ್ಟ ತಂಡಗಳು ಗಮನ ಸೆಳೆಯುತ್ತಿವೆ. ನಿನ್ನೆ ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದು ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡ ನೇಪಾಳ ಎದುರು ಆರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ಇಂದು ಟಿ ಟ್ವೆಂಟಿ ವಿಶ್ವಕಪ್ ನ ಆರನೇ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ಜೊತೆ ಸೆಣಸಾಡಲಿದೆ. ಇದು ಭಾರತ ತಂಡದ ಮೊದಲ ಪಂದ್ಯವಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದೊಡ್ಡ ತಂಡಗಳಿಗೂ ಸವಾಲ್ ಎಸೆಯುವ ಐರ್ಲೆಂಡ್ ತಂಡ ಇಂದು ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ. ನ್ಯೂಯಾರ್ಕ್ ನಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಈ ಪಂದ್ಯ ಪ್ರಸಾರವಾಗಲಿದೆ.