ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ವೀಕ್ಷಣೆಯ ಅನುಭೂತಿಯನ್ನು ಇನ್ನಷ್ಟು ಆಳವಾಗಿಸಲು ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2021ರ ಟಿ-20 ವಿಶ್ವಕಪ್‌ನಲ್ಲಿ ಬ್ಯಾಟ್-ಟ್ರಾಕಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಿದೆ.
ಇದೇ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಈ ತಂತ್ರಜ್ಞಾನ ತರಲಾಗಿದ್ದು, ಹಾಕ್-ಐ ಮೂಲಕ ಆಯ್ದ ಪಂದ್ಯಗಳಲ್ಲಿ ಈ ಸೇವೆ ಲಭ್ಯವಿದೆ. ಬಾಲ್ ಟ್ರಾಕಿಂಗ್ ಹಾಗೂ ತುದಿ ಪತ್ತೆ ಸೇವೆಗಳೊಂದಿಗೆ ಬ್ಯಾಟ್ ಟ್ರಾಕಿಂಗ್ ಅನ್ನೂ ತರಲಾಗುತ್ತಿದೆ. ಕೇಬಲ್ ತಂತಿಗಳಿಗೆ ತಗುಲಿ ಹಾಕಲಾದ ಸ್ಪೈಡರ್ ಕ್ಯಾಮ್ ಹಾಗೂ ಇನ್ನಿತರ ಫೀಚರ್‌ಗಳನ್ನು ವೀಕ್ಷಕರು ಸವಿಯಬಹುದಾಗಿದೆ.
ಮಂಗಳೂರು: ಕಚೇರಿಯಲ್ಲೇ ಖ್ಯಾತ ವಕೀಲನಿಂದ ಲೈಂಗಿಕ ಕಿರುಕುಳ, ಆಡಿಯೋ ವೈರಲ್; ದೂರು ದಾಖಲು
4ಡಿ ರೀಪ್ಲೇ ಮೂಲಕ ಬಹು ಕೋನದ ’ಸ್ಪಿನ್ ಅರೌಂಡ್’ ರೀಪ್ಲೇ ಸರಣಿಗಳು ಆಯ್ದ ಪಂದ್ಯಗಳಿಗೆ ಲಭ್ಯವಿರಲಿದೆ.
ಟೂರ್ನಿಯ ಪಂದ್ಯಗಳು ನಡೆಯಲಿರುವ ಎಲ್ಲಾ ಅಂಗಳಗಳಲ್ಲೂ 35 ಕ್ಯಾಮೆರಾಗಳು ಇರಲಿವೆ. ಆಟಗಾರರ ಲೈವ್ ಟ್ರಾಕಿಂಗ್ ಹಾಗೂ ಡೈನಾಮಿಕ್ ಕ್ಷೇತ್ರ ರಕ್ಷಣಾ ವಿವರಗಳನ್ನು ಸಹ ವೀಕ್ಷಕರು ನೋಡಬಹುದಾಗಿದೆ.