ನ್ಯೂಯಾರ್ಕ್: ಟಿ20 ವಿಶ್ವಕಪ್ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋಲಿನ ಸುಳಿಯಿಂದ ಪಾರಾಗಿ 7 ವಿಕೆಟ್ ಗಳಿಂದ ಗೆದ್ದ ಭಾರತ ತಂಡ ಸೂಪರ್- 8 ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ.
ಕಡಿಮೆ ಮೊತ್ತದ ಪಂದ್ಯದಲ್ಲಿ ಭಾರತ 7 ವಿಕೆಟ್ ಜಯಭೇರಿ ಬಾರಿಸಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನಿಂದ ಮೊದಲ ತಂಡವಾಗಿ ಸೂಪರ್ -8 ಹಂತ ಪ್ರವೇಶಿಸಿದೆ.
ನ್ಯೂಯಾರ್ಕ್ ನ ನೌಸೌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ಎಂಟು ವಿಕೆಟ್ ಗೆ 110 ರನ್ ಗಳಿಸಿತು. ಸುಲಭದ ಮೊತ್ತವಾದರೂ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ ನಂತರ 18.2 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು.
ಅಮೆರಿಕ ಪರವಾಗಿ ಸ್ಟೀವನ್ ಟೇಲರ್ 24, ನಿತೀಶ್ ಕುಮಾರ್ 27 ರನ್ ಗಳಿಸಿದರು. ಭಾರತದ, ಪರವಾಗಿ ಆರ್ಸ್ ದೀಪ್ ಸಿಂಗ್ 4, ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು. ಗೆಲುವಿನ ಗುರಿ ಬೆನ್ನತ್ತಿದ ಭಾರತದ ಪರ ಸೂರ್ಯ ಕುಮಾರ್ ಯಾದವ್ ಅಜೇಯ 50, ಶಿವಂ ದುಬೆ ಅಜೇಯ 31 ರನ್ ಗಳಿಸಿದರು. ಸೌರಭ್ ನೇತ್ರವಾಲಿಕರ್ ಎರಡು ವಿಕೆಟ್ ಪಡೆದರು.