ನ್ಯೂಯಾರ್ಕ್ ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಬಹು ನಿರೀಕ್ಷಿತ T20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ –ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಕೆನಡಾದ ರಾಪರ್ ಆಬ್ರೆ ಡ್ರೇಕ್ ಗ್ರಹಾಂ ಅವರು ಟೀಮ್ ಇಂಡಿಯಾ ಪರವಾಗಿ 5 ಕೋಟಿ ರೂ. ಬಾಜಿ ಕಟ್ಟಿದ್ದಾರೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂಬತ್ತನೇ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ. ಕೆನಡಾದ ರಾಪರ್ ಡ್ರೇಕ್ ಕ್ರಿಕೆಟ್ ಬಗ್ಗೆ ಬಾಜಿ ಕಟ್ಟಿದ್ದು ಇದೇ ಮೊದಲಲ್ಲ. IPL 2024 ರ ಫೈನಲ್‌ಗೆ ಮುಂಚಿತವಾಗಿ ಕೆಕೆಆರ್ ಪರ ಬಾಜಿ ಕಟ್ಟಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಗೆದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಕೆಕೆಆರ್ ಪರ ಬಾಜಿ ಕಟ್ಟಿ 2 ಕೋಟಿ ರೂ. ತನ್ನದಾಗಿಸಿಕೊಂಡಿದ್ದರು.
ಇಂದು ನಡೆಯಲಿರುವ ಪಾಕ್ –ಇಂಡಿಯಾ ಪಂದ್ಯದಲ್ಲಿ ಭಾರತದ ಪರ ಡ್ರೇಕ್ ಬೆಟ್ಟಿಂಗ್ ಕಟ್ಟಿದ್ದಾರೆ. ಬೆಟ್ಟಿಂಗ್ ಪ್ರಿಯರಿಗೆ ಭಾರತವೇ ಫೇವರಿಟ್ ತಂಡವಾಗಿದೆ.