ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಬುಧವಾರ ಟಿ 20 ವಿಶ್ವಕ್ಕೆ ಭಾರತ ತಂಡವನ್ನು ಘೋಷಿಸಿದೆ. ಟೀ ಇಂಡಿಯಾ ಪ್ರಕಟವಾಗ್ತಿದ್ದಂತೆ ವಿಶ್ವದಾದ್ಯಂತ ಚರ್ಚೆಯಾಗ್ತಿದೆ. ಟೀಮ್ ಇಂಡಿಯಾದ ಅತ್ಯುತ್ತಮ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ಗೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿಲ್ಲ. ಚಾಹಲ್ ಈ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.
ಚಾಹಲ್ ಇತ್ತೀಚೆಗೆ ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ, ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಘೋಷಣೆಯಾಗ್ತಿದ್ದಂತೆ ಪ್ರಪಂಚದಾದ್ಯಂತದ ಅಭಿಮಾನಿಗಳಿಂದ ಸಂದೇಶ, ಕರೆ ಬರ್ತಿದೆ. ಅವರ ಪ್ರೀತಿ ನೋಡಿ ಖುಷಿಯಾಗಿದೆ. ಜೀವನದ ಕೆಟ್ಟ ಸಮಯದಲ್ಲಿ, ನಿಕಟ ಜನರು ಮಾತ್ರ ಮತ್ತೆ ಎದ್ದೇಳಲು ಸಹಾಯ ಮಾಡ್ತಾರೆಂದು ಚಾಹಲ್ ಹೇಳಿದ್ದಾರೆ.
ಈ ಕೆಟ್ಟ ಸಮಯದಲ್ಲಿ, ಚಾಹಲ್ ಪತ್ನಿ ಧನಶ್ರೀ ಸಾಕಷ್ಟು ಸಹಾಯ ಮಾಡಿದ್ದಾರಂತೆ. ಐಪಿಎಲ್ ನಂತರ, ನಾನು ನನ್ನ ಕಳಪೆ ಫಾರ್ಮ್ ಬಗ್ಗೆ ನಿರಂತರವಾಗಿ ಯೋಚಿಸುತ್ತಿದ್ದೆ. ನಂತರ ನನ್ನ ಜೊತೆ ಕುಳಿತ ಪತ್ನಿ ಧನಶ್ರೀ, ನನಗೆ ತುಂಬಾ ಸಹಾಯ ಮಾಡಿದ್ದಾರೆ. ಪ್ರತಿದಿನ ವಿಕೆಟ್ ಪಡೆಯಲು ಸಾಧ್ಯವಿಲ್ಲ ಎಂದು ನನಗೆ ಸಮಾಧಾನ ಹೇಳಿದ್ದಾರೆ. ವಿಶ್ವಕಪ್ ತಂಡದಿಂದ ನನ್ನನ್ನು ಕೈಬಿಟ್ಟಾಗ ಧನಶ್ರೀ ಕೂಡ ಸಾಕಷ್ಟು ಟ್ರೋಲ್ ಆಗಿದ್ದರು ಎಂದು ಚಾಹಲ್ ಹೇಳಿದ್ದಾರೆ. ಈ ದಂಪತಿ, ಐಪಿಎಲ್‌ನ ಉಳಿದ ಪಂದ್ಯಗಳ ಮೊದಲು ಯುಎಇ ತಲುಪಿದ್ದಾರೆ.
ಯುಜ್ವೇಂದ್ರ ಚಾಹಲ್ ಟಿ 20 ಕ್ರಿಕೆಟ್ ನಲ್ಲಿ ಭಾರತದ ಅತ್ಯುತ್ತಮ ಬೌಲರ್. ಟಿ 20 ಯಲ್ಲಿ ಚಾಹಲ್ ಗಿಂತ ಹೆಚ್ಚಿನ ಬೌಲರ್‌ಗಳನ್ನು ಪಡೆಯಲು ಭಾರತದ ಯಾವುದೇ ಬೌಲರ್‌ಗೆ ಸಾಧ್ಯವಾಗಲಿಲ್ಲ. ಚಹಾಲ್ ಟಿ 20 ಕ್ರಿಕೆಟ್ ನಲ್ಲಿ 49 ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದಾರೆ. ಅದಕ್ಕಾಗಿಯೇ ಅವರನ್ನು ವಿಶ್ವಕಪ್‌ನಿಂದ ಕೈಬಿಟ್ಟಾಗ ದಿಗ್ಗಜರು ಹಾಗೂ ಅಭಿಮಾನಿಗಳು ಟೀಕಿಸಿದ್ದರು.