ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಅಕ್ಟೋಬರ್ 24ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲಿದೆ. ಭಾನುವಾರ ನಡೆಯುವ ಪಂದ್ಯವನ್ನು, ಕ್ರಿಕೆಟ್ ಅಭಿಮಾನಿಗಳು ಯುದ್ಧದ ರೀತಿಯಲ್ಲಿ ನೋಡ್ತಿದ್ದಾರೆ. ಪಂದ್ಯಕ್ಕೂ ಮುನ್ನ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಹತ್ವದ ಹೇಳಿಕೆ ನೀಡಿದ್ದಾರೆ. ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಪಾಕಿಸ್ತಾನ ಉತ್ತಮ ತಂಡ. ಶಕ್ತಿಯುತ ತಂಡ. ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ. ಇತರ ತಂಡಗಳ ವಿರುದ್ಧ ಆಡುವಂತೆ ಪಾಕ್ ವಿರುದ್ಧವೂ ಆಟ ಆಡುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ. ನಮಗೆ ದಾಖಲೆ ಮುಖ್ಯವಲ್ಲ. ತಂಡ ಅದ್ರ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲವೆಂದು ಕೊಹ್ಲಿ ಹೇಳಿದ್ದಾರೆ.
ಉಚಿತವಾಗಿ ಸಿಗ್ತಿದೆ ಪಡಿತರ: ಅ.30 ರ ವರೆಗೆ ಅವಕಾಶ
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆಯೂ ಕೊಹ್ಲಿ ಮಾಹಿತಿ ನೀಡಿದ್ದಾರೆ. ಹಾರ್ದಿಕ್ ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಈಗ ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ಹಾರ್ದಿಕ್ ಎರಡು ಓವರ್ ಬೌಲ್ ಮಾಡಬಹುದು ಎಂದಿದ್ದಾರೆ.