ಕ್ರಿಕೆಟ್ ಪ್ರಿಯರು, ಟಿ-20 ವಿಶ್ವಕಪ್ ವೀಕ್ಷಣೆಗೆ ಕಾದು ಕುಳಿತಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಪಂದ್ಯಾವಳಿಯನ್ನು ಸ್ಥಳಾಂತರಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ಪಂದ್ಯ ನಡೆಸಲು ಸಾಧ್ಯವಿಲ್ಲವೆಂದು ಬಿಸಿಸಿಐ, ಐಸಿಸಿಗೆ ತಿಳಿಸಿತ್ತು. ಈ ಬಗ್ಗೆ ಪತ್ರ ಬರೆದಿರುವುದಾಗಿ ಸೌರವ್ ಗಂಗೂಲಿ ಹೇಳಿದ್ದರು. ಈಗ ಟಿ-20 ವಿಶ್ವಕಪ್ ದಿನಾಂಕ ಹೊರ ಬಿದ್ದಿದೆ.
ಟಿ-20 ವಿಶ್ವಕಪ್ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿದೆ. ಕೆಲವು ಪಂದ್ಯಗಳು ಒಮಾನ್‌ನಲ್ಲಿ ನಡೆಯಲಿದೆ. ಪಂದ್ಯಾವಳಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ. ನವೆಂಬರ್ 14ರಂದು ಫೈನಲ್ ಹಣಾಹಣಿ ನಡೆಯಲಿದೆ. ವಿಶ್ವಕಪ್ ಪಂದ್ಯಾವಳಿ ಬಗ್ಗೆ ಮಂಗಳವಾರ ಐಸಿಸಿ ಅಧಿಕೃತ ಘೋಷಣೆ ಮಾಡಿದೆ.
ಭಾರತದ ಆತಿಥ್ಯದಲ್ಲಿಯೇ ಪಂದ್ಯಗಳು ನಡೆಯಲಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಶೇಖ್ ಜಾಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಮತ್ತು ಓಮನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.